Description
ಕಾಶೀಯಾತ್ರೆ ಪ್ರವಾಸಿಗಳ ಭೌತಿಕಯಾತ್ರೆಯೂ ಹೌದು, ಗುರೋಪದೇಶಾದಿಗಳಿಂದ ಸಿಗುವ ಜ್ಞಾನಯಾತ್ರೆಯೂ ಹೌದು, ಜ್ಞಾನ (ಪ್ರಕಾಶ)ದಿಂದ ಬೆಳಗುವ ಸತ್ಯವನ್ನು-ಏಕತೆಯನ್ನು-ವಿಶಾಲತೆಯನ್ನು ಅನುಭವಿಸುವ ವಿಜ್ಞಾನಮಯ ಯಾತ್ರೆಯೂ ಹೌದು, ಪೂರ್ಣ ಆನಂದದಲ್ಲಿ ಮುಳುಗಿ ತಲ್ಲೀನನಾಗಿರುವ (ತದಾತ್ಮನಾಗಿರುವ) ಆನಂದಮಯ ಯಾತ್ರೆಯೂ ಹೌದು ಎಂದುಕೊಂಡು ಮುಂದೆ ಸಾಗಬೇಕು. ಸತ್ಯವನ್ನು ತಿಳಿದು, ಅದನ್ನು ಅನುಭವಿಸಿ ಆನಂದಸಾಗರವನ್ನು ಸೇರಲು ಹೊರಟಾಗ ಜ್ಞಾನ ಅಥವಾ ಪ್ರಕಾಶವೇ ಆಸರೆ. ಪ್ರಕಾಶವನ್ನು ಹಿನ್ನೆಲೆಯಲ್ಲಿಟ್ಟುಕೊಂಡು, ನಮ್ಮ ನೆರಳೆಂಬ ಮಿಥ್ಯೆಯನ್ನು ಬಿಟ್ಟು, ವಿಶಾಲದೃಷ್ಟಿಯಿಂದ ಕಾಶಿಯ ತತ್ವವನ್ನು, ಪ್ರಕಾಶವನ್ನು ಅರ್ಥಮಾಡಿಕೊಳ್ಳಲು ಪ್ರಯತ್ನ ಮಾಡಿದಾಗಲೇ ನಮಗೆ ನಿಜಸ್ಥಿತಿ ತಿಳಿಯುವುದು.






