ಶಿವರಾಮ ಕಾರಂತರ ಬೆಲೆಬಾಳುವ ಬರಹಗಳು

200.00

Out of stock

ಮಾಲಿನಿ ಮಲ್ಯ

200.00

Description

ಡಿ ವಿ ಜಿ ಅವರು ಒಮ್ಮೆ “ಶಿವರಾಮ ಕಾರಂತರ ಅಖಂಡ ಸಾಹಿತ್ಯ ಸೇವೆಯನ್ನೂ ತರ್ಕಶುದ್ಧ ವಿಚಾರ ವೈಭವವನ್ನೂ ಮೆಚ್ಚದವರು ಯಾರು? ಅವರಂತೆ ಪ್ರಾಮಾಣಿಕ ನಿಷ್ಠೆಯನ್ನೂ ನಿರ್ಭೀತ ಚಿತ್ತವೃತ್ತಿಯನ್ನೂ ಹೊಂದಿರುವ ಮನುಷ್ಯರೇ ನಮ್ಮಲ್ಲಿ ವಿರಳ” ಎಂದದ್ದುಂಟು. ಸುಮಾರು ೫೦೦೦೦ ಪುಟಗಳನ್ನು ಮೀರಿಸುವ ವೈವಿಧ್ಯಮಯ ಸಾಹಿತ್ಯ, ಸೃಷ್ಟಿ ಕಾರಂತರದ್ದು. ಕವಿತೆ, ಸಣ್ಣಕತೆ, ಪ್ರಬಂಧ, ಹರಟೆ, ನಾಟಕ, ಕಾದಂಬರಿ, ಬಾಲ ಸಾಹಿತ್ಯ, ವೈಚಾರಿಕ ಸಾಹಿತ್ಯ, ವಿಜ್ಞಾನ ಸಾಹಿತ್ಯ, ಪ್ರವಾಸ ಸಾಹಿತ್ಯ, ಪಠ್ಯಪುಸ್ತಕ, ವಯಸ್ಕರ ಶಿಕ್ಷಣ ಸಾಹಿತ್ಯ, ಜೀವನ ಚರಿತ್ರೆ, ಆತ್ಮಕಥನ, ನಿಘಂಟು, ವಿಶ್ವಕೋಶ, ಭಾಷಾಂತರ – ಹೀಗೆ ಕಾರಂತರು ಕೃತಿ ರಚಿಸದ ಸಾಹಿತ್ಯ ಪ್ರಕಾರವೇ ಇಲ್ಲ. ಅವರು ೪೦೦ ಹೆಚ್ಚು ಕೃತಿಗಳನ್ನು ಸಾವಿರಾರು ಬಿಡಿ ಬರಹಗಳನ್ನು ರಚಿಸಿದ್ದಾರೆಂದರೆ ಯಾರಿಗೂ ಅಶ್ಚರ್ಯವದೀತು. ಜೊತೆಗೆ ಚಿತ್ರಕಲೆ, ಫೋಟೋಗ್ರಫಿ, ಮುದ್ರಣ, ಸಿನಿಮಾ, ಸಂಗೀತ, ಯಕ್ಷಗಾನ, ಪಕ್ಷಿವೀಕ್ಷಣೆ ಮುಂತಾದ ಇನ್ನೂ ಹಲವು ಕ್ಷೇತ್ರಗಳಲ್ಲಿ ಅವರಿಗೆ ತೀವ್ರ ಆಸಕ್ತಿ, ಆಳವಾದ ಪರಿಶ್ರಮ ಇತ್ತು. ಶ್ರೀಮತಿ ಮಾಲಿನಿ ಮಲ್ಯ ಅವರು ಸಂಪಾದಿಸಿ ಕೊಟ್ಟಿರುವ ಈ ಕೃತಿ ಶಿವರಾಮ ಕಾರಂತರ ಸಮಗ್ರ ಸಾಹಿತ್ಯದಿಂದ ಆರಿಸಿರುವ ಅತ್ಯುತ್ತಮ ಬರಹಗಳ ಒಂದು ಅಮೂಲ್ಯ ಭಂಡಾರ.

Main Menu

ಶಿವರಾಮ ಕಾರಂತರ ಬೆಲೆಬಾಳುವ ಬರಹಗಳು

200.00