Book Description
ಇಸ್ರೇಲಿನಲ್ಲಿ ಹಿಂದೆ ಯಹೂದಿ ಸಂಸ್ಕೃತಿ ಉಚ್ಛ್ರಾಯದಲ್ಲಿದ್ದಾಗ ಅಲ್ಲಿ ಸಾರ್ವತ್ರಿಕವಾಗಿ ಹೀಬ್ರೂ ಭಾಷೆಯೇ ಬಳಕೆಯಲ್ಲಿತ್ತು. ಆದರೆ ಇಸ್ರೇಲ್ ದೇಶ ಅನ್ಯಾಕ್ರಾಂತವಾಗಿ ಯಹೂದ್ಯರೆಲ್ಲ ಬೇರೆ ದೇಶಗಳಿಗೆ ವಲಸೆ ಹೋದ ಮೇಲೆ ಇಸ್ರೇಲಿನೊಳಗಡೆ ಹೀಬ್ರೂ ಭಾಷೆಯ ಪ್ರಯೋಗ ಧಾರ್ಮಿಕವಿಧಿಗಳಿಗಷ್ಟೆ ಸೀಮಿತವಾಯಿತು. ಕ್ರಮೇಣ ’ದಿನನಿತ್ಯದ ವ್ಯವಹಾರಕ್ಕೆ ಹೀಬ್ರೂ ಬಳಸುವುದು ಪಾಪ. ದೇವರ ಭಾಷೆಯಲ್ಲಿ ಮಾತನಾಡಲು ಮನುಷ್ಯರಿಗೆ ಏನು ಅಧಿಕಾರ? ಎಂಬ ಮನೋವೃತ್ತಿ ಬೆಳೆಯಿತು. ಆದರೆ ಕೆಲವು ಶತಮಾನಗಳ ತರುವಾಯ ‘ಹೀಬ್ರೂ ಭಾಷೆಯನ್ನು ಮತ್ತೆ ಬಳಕೆಗೆ ತರಲು ಸಾಧ್ಯವಾದರೆ ಅದು ಯಹೂದಿ ಸಂಸ್ಕೃತಿಯ ಪುನರುಜ್ಜೀವನಕ್ಕೂ ದಾರಿ ಮಾಡುತ್ತದೆ’ ಎಂದು ಕೆಲವರಿಗೆ ಅನಿಸತೊಡಗಿತು. ಅಂತಹವರಲ್ಲಿ ಪ್ರಮುಖ, ಎಲಿಸರ್ ಬೆನ್-ಯಹೂದ (1858-1922). ಬೆನ್-ಯಹೂದನ ಧ್ಯೇಯಾಭಿಮುಖ ಜೀವನದಲ್ಲಿ ಎದುರಾದ ಕಠಿಣ ಪರಿಸ್ಥಿತಿಗಳನ್ನು ಅವನು ಎದುರಿಸಿದ ರೀತಿ ಪ್ರೇರಣಾದಾಯಕ. ರೋಮಾಂಚಕ ಮತ್ತು ಹೃದಯಸ್ಪರ್ಶಿ ಸನ್ನಿವೇಶಗಳಿಂದ ತುಂಬಿರುವ ಕಥಾನಕಗಳಿಂದ ಕೂಡಿದ ಅವನ ಸಾಹಸಗಾಥೆಯೇ ’ಮತ್ತೆ ಹೊತ್ತಿತು ಹೀಬ್ರೂ ಹಣತೆ’ ಪುಸ್ತಕದ ವಸ್ತು.
Reviews
There are no reviews yet.