ಡಿ ಆರ್ ನಾಗರಾಜ್ ಅವರ ಬೆಲೆಬಾಳುವ ಬರಹಗಳು

250.00270.00 (-7%)

In stock

ಡಾ|| ಎಂ ಎಸ್ ಆಶಾದೇವಿ

Compare

250.00270.00 (-7%)

Description

ಡಿ ಆರ್ ನಾಗರಾಜ್ ಅವರ ಈ ಪ್ರಯಾಣವನ್ನು “ಮಹಾ ಪ್ರಯಾಣ” ಎಂದು ಖಂಡಿತ ಕರೆಯಬಹುದು. ಇದನ್ನೇ ಶಾಸ್ತ್ರೀಯವಾಗಿ ಮಂಡಿಸುವುದಾದರೆ ಇದೊಂದು ವಿಕಾಸಶೀಲ ಮಾನವಿಕ ಅಧ್ಯಯನದ ಅಪೂರ್ವ ಮಾದರಿ. ಸ್ವತಃ ಡಿ ಆರ್ ತಮ್ಮನ್ನು “ಬೌದ್ಧಿಕ ನೇಕಾರ” ಎಂದು ಕರೆದುಕೊಳ್ಳುತ್ತಾರೆ. ಸಾಹಿತ್ಯ ವಿಮರ್ಶೆಯಿಂದ ಆರಂಭವಾದ ಇವರ ಈ ಶೋಧ ಶಕ್ಯವಿರುವ ಎಲ್ಲ ಜ್ಞಾನಶಾಖೆಗಳನ್ನೂ ನಿರಂತರವಾಗಿ ಒಳಗೊಳ್ಳುತ್ತಾ ಹೋಯಿತು. ಜ್ಞಾನಪೀಪಾಸುವಿನಂತೆ ಕಾಣುತ್ತಿದ್ದ ಈ ಪ್ರತಿಭೆಗೆ, ಅದು ಜ್ಞಾನದ ಶೋಧ ಮಾತ್ರವಾಗದೇ ತನ್ನ ಕಾಲದ, ತನ್ನ ಜನಾಂಗದ ಅಸ್ತಿತ್ವ ಮತ್ತು ಅಸ್ಮಿತೆಯ ಪ್ರಶ್ನೆಯೂ ಆಯಿತು. ಅವರ ಹುಡುಕಾಟಕ್ಕಿರುವ ತೀವ್ರತೆಯ ಹಿಂದೆ ಕೆಲಸ ಮಾಡುತ್ತಿದ್ದದ್ದು ಇದೇ ಅಂಶ. ತನ್ನ ಸಮುದಾಯವನ್ನು ಸದೃಢವಾಗಿಸುವ, ಅರೋಗ್ಯಪೂರ್ಣವಾಗಿಸುವ ಈ ಅಪ್ಪಟ ಮಾನವೀಯ ಕಾಳಜಿಯು ಅದರ ಸೌಂದರ್ಯ ಮೀಮಾಂಸೆಯಲ್ಲಿಯೂ ಎಂದೂ ನಂಬಿಕೆಯನ್ನು ಮತ್ತು ಪ್ರೀತಿಯನ್ನು ಕಳೆದುಕೊಳ್ಳಲಿಲ್ಲ. ಈ ಅಂಶವೇ ಅವರನ್ನು ಅಖಿಲ ಭಾರತ ಮಟ್ಟದಲ್ಲೂ ಅಂತಾರಾಷ್ಟ್ರೀಯ ಮಟ್ಟದಲ್ಲೂ ಸ್ಥಾಪಿಸಿಕೊಳ್ಳಲು ನೆರವಾಯಿತು.

Main Menu

ಡಿ ಆರ್ ನಾಗರಾಜ್ ಅವರ ಬೆಲೆಬಾಳುವ ಬರಹಗಳು

250.00270.00 (-7%)

Add to Cart