ಮೋದಿ ಮುಸ್ಲಿಂ ವಿರೋಧಿಯೇ ?

135.00150.00 (-10%)

In stock

ಗುಜರಾತಿನಲ್ಲಿ ನಿಜಕ್ಕೂ ನಡೆದದ್ದೇನು ? ಮೋದಿ ಮಾಡಿದ್ದೇನು ? – ಪ್ರತಾಪಸಿಂಹ

135.00150.00 (-10%)

Description

ಅದು ಫೆಬ್ರವರಿ, 2002. ಗುಜರಾತ್ ಕೋಮುಗಲಭೆ ತುತ್ತತುದಿಯಲ್ಲಿತ್ತು. ನನಗೆ ಆಗಾ ಖಾನ್‍ರ ಕಚೇರಿಯಿಂದ ಫೋನ್ ಕರೆಯೊಂದು ಬಂತು. ಹಿಂದುಗಳೇ ಹೆಚ್ಚಾಗಿರುವ ಪ್ರದೇಶದ ಮಧ್ಯದಲ್ಲಿದ್ದ ಖೋಜಾ ಮುಸ್ಲಿಮರ ಕಾಲೋನಿಗೆ ದಾಳಿಯ ಬೆದರಿಕೆ ಇದೆಯೆಂದು ಅವರು ನನಗೆ ತಿಳಿಸಿದರು. ವಾಜಪೇಯಿಯವರ ಎನ್ ಡಿ ಎ ಸರಕಾರದಲ್ಲಿದ್ದ ಗ್ರಹ ಸಚಿವರಾಗಿದ್ದ ಎಲ್ ಕೆ ಆಡ್ವಾಣಿಯವರಿಗೆ ನಾನು ಫೋನ್ ಮಾಡಿದೆ. ಆಡ್ವಾಣಿ ಮೋದಿಯವರ ಜೊತೆ ಮಾತಾಡಿದರು. ಕೆಲವೇ ಕ್ಷಣಗಳಲ್ಲಿ ನರೇಂದ್ರ ಮೋದಿಯವರೇ ನನಗೆ ಕರೆ ಮಾಡಿ, “ನಜ್ಮಾ ಬೆನ್ ದಯವಿಟ್ಟು ನೀವು ಚಿಂತೆ ಮಾಡಬೇಡಿ, ನಾನು ವೈಯಕ್ತಿಕವಾಗಿ ಈ ಬಗ್ಗೆ ಗಮನಹರಿಸಿ ಅವರು ಸುರಕ್ಷಿತವಾಗಿರುವಂತೆ ನೋಡಿಕೊಳ್ಳುತ್ತೇನೆ” ಎಂದರು ಹಾಗೂ ಮೋದಿ ತಮ್ಮ ಮಾತಿನಂತೆಯೇ ನಡೆದುಕೊಂಡರು. ಕೂಡಲೇ ಸೈನ್ಯವನ್ನು ಕಳಿಸಿ, ಆ ಕಾಲೋನಿಗೆ ಯಾವ ಅಪಾಯವೂ ಆಗದಂತೆ ನೋಡಿಕೊಂಡರು. ನನ್ನ ಅನುಭವದ ಪ್ರಕಾರ ಮೋದಿಯವರು, ಅವರ ಗಮನಕ್ಕೆ ಬಂದ ಎಲ್ಲಾ ದೂರುಗಳಿಗೂ, ಕರೆಗಳಿಗೂ ಸ್ಪಂದಿಸಿ ವೈಯಕ್ತಿಕವಾಗಿ ಅವುಗಳನ್ನು ಪರಿಹರಿಸಲು ಆಸ್ಥೆ ವಹಿಸಿದ್ದರು. ಮೋದಿಯವರು ಬೋಹ್ರಾ ಮತ್ತು ಖೋಜಾ ಮುಸ್ಲಿಂ ಸಮುದಾಯಕ್ಕೆ ಗಣನೀಯವಾದ ಸಹಾಯ ಮಾಡಿದ್ದಾರೆ. ಈ ಸಂದರ್ಭದಲ್ಲಿ ನನ್ನ ಅರಿವಿಗೆ ಬಂದದ್ದೇನೆಂದರೆ ಬಿಜೆಪಿಯಲ್ಲಿ ಮಾತ್ರ ಮುಸ್ಲಿಮರಿಗೆ ಗೌರವಾರ್ಹ ಸ್ಥಾನ ಸಿಗುತ್ತದೆ.
ನಜ್ಮಾ ಹೆಪ್ತುಲ್ಲಾ – ಖ್ಯಾತ ಸ್ವಾತಂತ್ರ್ಯ ಹೋರಾಟಗಾರ ಅಬುಲ್ ಕಲಾಂ ಅಝಾದರ ಮರಿ ಸೊಸೆ ಹಾಗೂ ರಾಜ್ಯಸಭೆಯ ಮಾಜಿ ಉಪಸಭಾಧ್ಯಕ್ಷೆ

Main Menu

ಮೋದಿ ಮುಸ್ಲಿಂ ವಿರೋಧಿಯೇ ?

135.00150.00 (-10%)

Add to Cart