ಮಂಥನ

350.00

In stock

350.00

Description

ಸ್ವಾತಂತ್ರ್ಯೋತ್ತರ ಭಾರತದ ಆಗುಹೋಗುಗಳನ್ನು ವಸ್ತುನಿಷ್ಠವಾಗಿ ಅವಲೋಕಿಸಿದಾಗ ಮೌಲ್ಯವಂತಿಕೆಯ ವೈಚಾರಿಕ ಸ್ಫುಟತೆಯ ಹಾಗೂ ನೈಜ ರಾಷ್ಟ್ರೀಯ ದೃಷ್ಟಿಯ ಅಭಾವ ಎದ್ದು ಕಾಣುತ್ತದೆ. ಅಧಿಕಾರಾಕಾಂಕ್ಷೆ ಮತ್ತು ಪಕ್ಷರಾಜಕೀಯವೇ ಏಕೈಕ ನಿರ್ದೆಶಕ ಶಕ್ತಿಯಾಗಿದೆ. ಈ ಕಾರಣದಿಂದ ರಾಷ್ಟ್ರದ ಭದ್ರತೆ, ಅಖಂಡತೆ, ಸ್ವಾಯತ್ತತೆ ಮೊದಲಾದ ಆಧಾರಗಳು ಶಿಥಿಲಗೊಂಡಿವೆ. ಅದಕ್ಷತೆ, ಭ್ರಷ್ಟಾಚಾರ, ಛದ್ಮಸೆಕ್ಯುಲರಿಸಂ ಮೊದಲಾದವು ಈ ಶೈಥಿಲ್ಯದ ಕೆಲವು ಅಭಿವ್ಯಕ್ತಿಗಳು. ಈ ವಿಕೃತಿಗಳು ಎಷ್ಟು ದೂರ ಸಾಗಿವೆಯೆಂದರೆ ಆಧಾರಭೂತ ಸಂಗತಿಗಳನ್ನು ಕುರಿತ ಆರೋಗ್ಯಕರ ಸಂವಾದವೇ ಈಗ ವಿರಳವಾಗಿದೆ. ಈ ಪರಿಸರದಲ್ಲಿ ರಾಜ್ಯಶಾಸ್ತ್ರ್ತದಲ್ಲಿ ಸ್ನಾತಕೋತ್ತರ ಪದವೀಧರರಾದ ಗೋಪಾಲರಾವ ಹೇಜೀಬ್ (1936-2008) ಅವರ ಋಜುದೃಷ್ಟಿಯ ಮೊನಚಾದ ಬರಹಗಳು ಸತ್ಯದ ಪರವಾದ ಕಹಳೆಯಾಗಿದೆ; ಬೌದ್ಧಿಕ ಜಡತೆಗೆ ಸೂಜಿಮದ್ದಾಗಿದೆ. ಸಮಕಾಲೀನ ಇತಿಹಾಸ, ರಾಷ್ಟ್ರ ಭದ್ರತೆ, ವಿದೇಶಾಂಗ ನೀತಿ, ಸಂಸ್ಕೃತಿಯ ಮೇಲಣ ವಿಘಾತಗಳು ಸೆಕ್ಯುಲರಿಸಂ ಗವುಸಿನೊಳಗಿನ ಹೊಸ ಮೂಲಭೂತವಾದ, ಮತಾಂತರ, ಭಯೋತ್ಪಾದನೆ, ಭ್ರಷ್ಟಾಚಾರ, ನಾಯಕತ್ವ – ಈ ನಾನಾ ವಿಷಯಗಳ ತಲಸ್ವರ್ಶಿ ವಿಶ್ಲೇಷಣೆಯನ್ನೂ ಮಾಹಿತಿಯನ್ನೂ ಒಳಗೊಂಡ ಈ ಗ್ರಂಥದೊಳಗಿನ ಬರಹಗಳು ಕಳೆದ ಮೂರು ದಶಕಗಳ ವಿದ್ಯಮಾನಗಳ ಒಂದು ಸೀಳುನೋಟವನ್ನು ಒದಗಿಸುತ್ತವೆ. ಹೀಗೆ ಚಿಂತಕರಿಗೆ ಒಂದು ಅನುಪಮ ಆಕರಗ್ರಂಥವಾಗಿದೆ ’ಮಂಥನ’.

Specification

Additional information

book-no

106

isbn

ISBN : 81-7531-052-9

author-name

published-date

2010

language

Kannada

Main Menu

ಮಂಥನ

350.00

Add to Cart