ನಾಗರಿಕತೆಯ ಸಂಘರ್ಷ

125.00

In stock

125.00

Description

ಹಿಂದಿನ ಶತಮಾನಗಳಲ್ಲಿ ಹೋರಾಟಗಳು ಸಾಮ್ರಾಜ್ಯಶಾಹಿಗಳಿಗೂ ಅಧೀನರಾಷ್ಟ್ರಗಳಿಗೂ ನಡುವೆ ನಡೆದಿದ್ದವು. ಸಾಂಪ್ರದಾಯಿಕತೆಗೂ ಆಧುನಿಕತೆಗೂ ನಡುವೆ ವಿರೋಧಭಾವವಿದೆಯೆಂಬ ಮಂಡನೆ ಹತ್ತೊಂಬತ್ತನೇ ಶತಮಾನದ ಅಂತ್ಯದಲ್ಲಿ ಮುನ್ನೆಲೆಯಲ್ಲಿತ್ತು. ಬಲಿಷ್ಠದೇಶಗಳ ಆರ್ಥಿಕ ಏಕಸ್ವಾಮ್ಯವೇ ವಿವಿಧ ಸಂಘರ್ಷಗಳ ಮೂಲಕಾರಣವೆಂಬ ಮಂಡನೆ ಇಪ್ಪತ್ತನೇ ಶತಮಾನದ ಮಧ್ಯಭಾಗದಿಂದೀಚೆಗೆ ನಡೆದಿತ್ತು. ಜಗತ್ತಿನ ಸೆಣಸಾಟಗಳ ಮೂಲವು ಪ್ರಮುಖ ನಾಗರಿಕತೆಗಳ ಸ್ವರೂಪದಲ್ಲಿಯೆ ಇರುವ ಭಿನ್ನತೆಗಳು ಎಂಬ ವಾದ ಈಚೆಗೆ ಪ್ರಚಲಿತವಾಗಿದೆ. ಆಳಕ್ಕೆ ಹೊಕ್ಕು ನೋಡುವಾಗ ರಾಜಕೀಯ, ಆರ್ಥಿಕ, ಸಾಮಾಜಿಕ, ಸಾಂಸ್ಕೃತಿಕ ಕ್ಷೇತ್ರಗಳ ಬಗೆಬಗೆಯ ಸಮಸ್ಯೆಗಳ ಮೂಲದಲ್ಲಿರುವುದು ಎರಡುಭಿನ್ನ ಜೀವನದೃಷ್ಟಿಗಳ ನಡುವಣ ಮುಖಾಮುಖಿಯೇ ಎನ್ನಬೇಕಾಗುತ್ತದೆ. ಮಥಿತಾರ್ಥವೆಂದರೆ – ಹೊರತೋರಿಕೆಗಳು ಹೇಗೇ ಇದ್ದರೂ – ಹಿಂದಿನಿಂದ ಇಂದಿನವರೆಗೆ ಸಂಘರ್ಷಗಳು ನಡೆದಿರುವುದು ಸಭ್ಯತೆಗೂ ಬರ್ಬರತೆಗೂ ನಡುವೆಯೇ ಎಂಬುದು ತಥ್ಯ. ಹೀಗಿರುವುದರಿಂದ, ಈಗಿನ ಜಗದ್‌ವ್ಯಾಪಿ ಸಂಘರ್ಷಗಳನ್ನು ರಾಜಕೀಯ-ಆರ್ಥಿಕ ಆಗುಹೋಗುಗಳ ಹಿನ್ನೆಲೆಯಲ್ಲಷ್ಟೆ ಅರ್ಥೈಸಲೆಳಸುವುದು ಪ್ರಯೋಜನಕರವಲ್ಲ. ತುಮುಲಗಳ ಬೇರುಗಳಿರುವುದು ಎರಡುಭಿನ್ನ ಜೀವನದೃಷ್ಟಿಗಳಲ್ಲಿ – ಎಂದು ಮನಗಾಣಬೇಕಿದೆ. ಈ ತಾತ್ತ್ವಿಕತೆಯ ಹಲವು ಮಗ್ಗುಲುಗಳ ಅವಲೋಕನವನ್ನು ’ನಾಗರಿಕತೆಗಳ ಸಂಘರ್ಷ’ ಗ್ರಂಥದ ಪ್ರಬಂಧಗಳಲ್ಲಿ ಕಾಣಬಹುದು.

Specification

Additional information

book-no

104

isbn

ISBN : 81-7531-050-2

author-name

published-date

2009

language

Kannada

Main Menu

Placeholder

ನಾಗರಿಕತೆಯ ಸಂಘರ್ಷ

125.00

Add to Cart