ನಾನೇಕೆ ಹಿಂದು?

112.00140.00 (-20%)

In stock

ಮಹಾತ್ಮ ಮೋಹನದಾಸ್ ಕರಮಚಂದ್ ಗಾಂಧಿ ಅವರ ಧಾರ್ಮಿಕ ಚಿಂತನೆಗಳು ಮತ್ತು ಜೀವಿತ ಘಟನೆಗಳು

112.00140.00 (-20%)

Description

ಮೋಹನದಾಸ ಕರಮಚಂದ ಗಾಂಧಿ ಮೂಲತಃ ಆಧ್ಯಾತ್ಮಿಕಪುರುಷರು. ಹಿಂದುಧರ್ಮದ ಸನಾತನ ವೃಕ್ಷದಿಂದ ಅರಳಿದ ಸುಮನ ಅವರ ಜೀವನ. ಅದುಕಾರಣ, ’ಜೀವನೋಪಾಯಕ್ಕಾಗಿ ದಕ್ಷಿಣ ಆಫ್ರಿಕಕ್ಕೆ ಹೋದೆನಾದರೂ ಈಶ್ವರಾನ್ವೇಷಣೆ ಹಾಗೂ ಆತ್ಮದರ್ಶನಕ್ಕಾಗಿ ಪ್ರಯತ್ನಿಸಲು ಪ್ರೇರಣೆ ಪಡೆದೆ’ ಎಂದರು. ಆತ್ಮದ ಅಸ್ತಿತ್ವದಲ್ಲಿ ನಂಬಿಕೆ ಇಡುವ ಹಿಂದುತ್ವದಲ್ಲಿ ಶ್ರದ್ಧೆ ಇದ್ದುದರಿಂದಲೇ ಅವರು ‘ಮಹಾತ್ಮ ಗಾಂಧಿ’ ಆದರು ; ‘ಗಾಂಧಿ ದಿ ಗ್ರೇಟ್’ ಆಗಲಿಲ್ಲ !

ಗಾಂಧಿಜೀಯವರಿಗೆ ಭಾರತದ ಪ್ರಾಚೀನತೆ, ಸಂಸ್ಕೃತಿಯ ಶ್ರೇಷ್ಠತೆಗಳಲ್ಲಿ ಗಾಢ ನಂಬಿಕೆ. ರಾಮರಾಜ್ಯದ ಸ್ಥಾಪನೆ ಅವರ ಆದರ್ಶ. ತಿಲಕರಂತೆಯೇ ಗಾಂಧಿಯವರಿಗೂ ಭಗವದ್ಗೀತೆಯೇ ಜೀವನದ ಬೆಳಕು. ಅವರು ಇಲ್ಲಿಯ ಮಣ್ಣಿನ ವೈಶಿಷ್ಟ್ಯಗಳ ತಳಹದಿಯ ಮೇಲೆ ಸುಖ-ಶಾಂತಿ-ಸಮೃದ್ಧಿಗಳ ಭವ್ಯರಾಷ್ಟ್ರ ನಿರ್ಮಿಸುವ ಕನಸು ಕಂಡವರು. ಸತ್ತ್ವಪೂರ್ಣ ಆಚಾರವಿಚಾರಗಳ ಅನುಸರಣೆಗೆ, ಗೋವಿನ ಸಂರಕ್ಷಣೆಗೆ ಮಹತ್ತ್ವ ನೀಡಿದವರು. ತಾವು ಹಿಂದು ಎಂಬ ಬಗ್ಗೆ ಹೆಮ್ಮೆಯಿಂದ ಎದೆಯುಬ್ಬಿಸಿದವರು. `ನಾನೇಕೆ ಹಿಂದು?’ ಎಂಬುದಕ್ಕೆ ಸತರ್ಕವಾಗಿ ಕಾರಣಗಳನ್ನು ವಿವರಿಸಿದವರು.

ಗಾಂಧಿ ಸಾಹಿತ್ಯಸಾಗರದ ಆಳದಿಂದ ಆರಿಸಿ ತಂದ ಕೆಲವೊಂದು ಮಾತಿನ ಮುಕ್ತಾಹಾರ ಈ ಪುಸ್ತಕ.

Specification

Additional information

author-name

book-no

10

no-of-pages

xiv + 160

isbn

81-7531-089-8

Main Menu

ನಾನೇಕೆ ಹಿಂದು?

112.00140.00 (-20%)

Add to Cart