ಕಶೀರ

360.00375.00 (-4%)

In stock

ಸಹನಾ ವಿಜಯಕುಮಾರ್

360.00375.00 (-4%)

Description

ಮಹತ್ತರವಾದ ಕಾದಂಬರಿ ಬರೆಯಲು, ಕಳೆದ ಎಪ್ಪತ್ತು ವರ್ಷಗಳಿಂದ ಕುದಿಯುತ್ತಿರುವ ಕಶ್ಮೀರದ ಸಮಸ್ಯೆಗಿಂತ ಬೇರೆ ವಸ್ತು ಯಾವುದಿದೆ? ಎರಡು ಸಂಸ್ಕೃತಿಗಳ ಘರ್ಷಣೆ. ಅದರ ಇತಿಹಾಸ, ಭಾರತದ ಎಲ್ಲ ದಿಕ್ಕುಗಳಿಂದಲೂ ವಿದ್ವಾಂಸರನ್ನು, ಮುಮುಕ್ಷುಗಳನ್ನು ಆಕರ್ಷಿಸುತ್ತಿದ್ದ ಸರ್ವಜ್ಞಪೀಠದ ನಾಶ, ತಮ್ಮತಮ್ಮ ಭಾಗಗಳಲ್ಲಿ ಕ್ಷುದ್ರ ಓಟಿಗಾಗಿ ಕಶ್ಮೀರದ ಉಗ್ರರಿಗೆ ಡೊಗ್ಗು ಸಲಾಮು ಹಾಕುತ್ತಿದ್ದ ಮಹಾನ್ ದೇಶದ ಮಹಾನ್ ಪ್ರಜಾಪ್ರಭುತ್ವದ ನಿಸ್ಸತ್ವ ರಾಜಕಾರಣಿಗಳು, ಸೈನಿಕರ ಕೈಗಳನ್ನು ಹಿಂದಕ್ಕೆ ಕಟ್ಟಿ ಉಗ್ರರನ್ನು ನಿಗ್ರಹಿಸು ಎಂದು ಹುಕುಂ ನೀಡುತ್ತಿದ್ದ ಉತ್ತರಕುಮಾರನ ಸರಕಾರ, ಹೀಗೆ ಒಂದೊಂದು ಮುಖವೂ ಈ ಆಧುನಿಕ ಮಹಾಭಾರತದ ಅಂಗವೇ.
ಇಡೀ ರಾಷ್ಟ್ರದ, ಇಡೀ ಮಾನವ ಜನಾಂಗದ ಸಾಂಸ್ಕೃತಿಕ ಸಂಘರ್ಷವನ್ನು ಕಾಣಿಸುವ ವಸ್ತುವನ್ನು ಹಿಡಿಯುವುದು, ಅದಕ್ಕೆ ಬೇಕಾದ ಅಧ್ಯಯನ, ಧೈರ್ಯ, ಚಿಂತನೆ, ಅನ್ವೇಷಣೆಗಳಲ್ಲಿ ತೊಡಗುವುದು ದೊಡ್ಡ ಭವಿಷ್ಯದ ಭರವಸೆ. ಈ ಲೇಖಕಿಯು ಈ ಕಾದಂಬರಿಯ ಮೂಲಕ ಅಂಥಹ ಭರವಸೆಯನ್ನು ಕೊಟ್ಟಿದ್ದಾರೆ.

Main Menu

ಕಶೀರ

360.00375.00 (-4%)

Add to Cart