ಮೋಪ್ಲಾ ಕಾಂಡ

150.00

In stock

150.00

Description

ದಕ್ಷಿಣ ಭಾರತದ ಕೇರಳ ಪ್ರಾಂತದಲ್ಲಿ (ಹಿಂದೆ ’ಮಲಬಾರ್) 1920ರ ದಶಕದಲ್ಲಿ ಮೋಪ್ಲಾ(ಮಾಪ್ಪಿಳ್ಳೆ)ಗಳು ನಡೆಸಿದ ದೌರ್ಜನ್ಯಸರಣಿಯನ್ನು ವಸ್ತುವಾಗಿರಿಸಿಕೊಂಡು ಸ್ವಾತಂತ್ರ್ಯವೀರ ವಿನಾಯಕ ದಾಮೋದರ ಸಾವರಕರ್ ಅವರು 1926ರಲ್ಲಿ ಕಾದಂಬರಿಯ ರೂಪದಲ್ಲಿ ಬರೆದ ಕೃತಿ, ’ಮೋಪ್ಲಾ ಕಾಂಡ’ (ಮರಾಠಿ ಮೂಲದ ಹೆಸರು – ’ಮಲಾ ಕಾಯ್ ತ್ಯಾಚೇ). ಗಾಂಧಿಯವರು ಕೈಗೊಂಡ ಖಿಲಾಫತ್ ಆಂದೋಲನದ ಹಿಂದುಗಡೆ ಗರಿಗೆದರಿದ ಬಂಡಾಯದ ಪರಿಣಾಮವಾಗಿ ಸ್ವಾತಂತ್ರ್ಯಪರ ರಾಷ್ಟ್ರೀಯಾಂದೋಲನ ಮಾರ್ಗಚ್ಯುತವಾಯಿತು. ಅಗಾಧ ಪ್ರಮಾಣದ ನರಹತ್ಯೆ ಮತ್ತು ಇಸ್ಲಾಮಿಗೆ ಮತಾಂತರ, ಲೂಟಿ-ಹಿಂಸಾಚರಣೆ, ಜೀವಹಾನಿ-ಆಸ್ತಿಹಾನಿಗಳು ಆದವು. ಆಂಗ್ಲಪ್ರಭುತ್ವದ ಸೇನೆಯು ದೃಢ ಪ್ರಯತ್ನದಿಂದ ಬಂಡಾಯವನ್ನು ಅಣಗಿಸಬೇಕಾಯಿತು. ಈಚಿನ ವರ್ಷಗಳಲ್ಲಿ ಆ ದುಷ್ಪರ್ವವನ್ನು ಸ್ವಾತಂತ್ರ್ಯಸಂಘರ್ಷವೆಂದು ಚಿತ್ರಿಸುವ ಮತ್ತು ಅದರ ಸ್ಮರಣೆಯನ್ನು ಮಸುಕುಗೊಳಿಸುವ ಹೇಯ ಪ್ರಯತ್ನಗಳಾಗಿವೆ. ಆ ಘಟನಾವಳಿಯ ಪರಿಣಾಮಪರಂಪರೆ ಎಂಟು ದಶಕಗಳ ತರುವಾಯವೂ ಜೀವಂತವಿದೆ. ಈ ಕಾರಣದಿಂದ ’ಮೋಪ್ಲಾ ಕಾಂಡ’ದ ಯಥಾರ್ಥ ಚಿತ್ರಣವನ್ನು ಇಂದಿನ ಪೀಳಿಗೆಯ ಮುಂದಿರಿಸುವ ಉದ್ದೇಶದಿಂದ ಈ ಕನ್ನಡಾನುವಾದ ಹೊರತರಲಾಗಿದೆ.

Specification

Additional information

book-no

102

isbn

ISBN : 81-7531-048-0

moola

ವಿನಾಯಕ ದಾಮೋದರ ಸಾವರಕರ್

author-name

published-date

2009

language

Kannada

Main Menu

ಮೋಪ್ಲಾ ಕಾಂಡ

150.00

Add to Cart