ಅಗ್ನಿಪಥಿಕೆ ನಿವೇದಿತಾ

100.00

In stock

100.00

Description

ಇಪ್ಪತ್ತನೇ ಶತಮಾನದ ಮೊದಲ ದಶಕದಲ್ಲಿ ಹಿಂದೂ ಸಮಾಜದ ಹೆಚ್ಚಿನ ಸಕ್ರಿಯತೆಗಾಗಿ ಎಲ್ಲ ಕ್ಷೇತ್ರಗಳಲ್ಲಿಯೂ ಸ್ವದೇಶೀ ಚಿಂತನೆಯ ಅನುವರ್ತನೆಗಾಗಿ ಅಸಾಮಾನ್ಯ ಸಮರ್ಪಣಭಾವದಿಂದ ಶ್ರಮಿಸಿ ಯಶಃಕಾಯರಾದವರು ಸ್ವಾಮಿ ವಿವೇಕಾನಂದರ ಕರಕಮಲಸಂಜಾತರಾದ ಸೋದರಿ ನಿವೇದಿತಾ. ಅತ್ಯಂತ ಪ್ರತಿಕೂಲ ರಾಜಕೀಯ-ಸಾಮಾಜಿಕ ಸನ್ನಿವೇಶದಲ್ಲಿ ಸಮಾಜಜಾಗೃತಿಗಾಗಿ ಒಬ್ಬ ಸಾಧಕರು ಪರಿಶ್ರಮಿಸಿ, ದಂತಕಥೆಯೆನಿಸುವಂತೆ ತಮ್ಮ ಪದಚಿಹ್ನೆಗಳನ್ನು ಉಳಿಸಿಹೋದ ಇನ್ನೊಂದು ಉದಾಹರಣೆ ದುರ್ಲಭ. ಈ ಅಗಾಧ ಸಾಧನೆಯನ್ನು ಆಕೆ ಹದಿನಾಲ್ಕು ವರ್ಷಗಳಷ್ಟು ಅಲ್ಪಕಾಲದಲ್ಲಿ ಮಾಡಿದುದಂತೂ ವಿಸ್ಮಯಾವಹ. ಸ್ವಾತಂತ್ರ್ಯ ಸಂಗ್ರಾಮದ ಮುನ್ನಡೆಗಾಗಿಯೂ ವಿವಿಧಮುಖ ಸಾಂಸ್ಕೃತಿಕ ಉಜ್ಜೀವನಕ್ಕಾಗಿಯೂ ಸೋದರಿ ನಿವೇದಿತಾರಿಂದ ಸಂದ ಕೊಡುಗೆಯ ಸ್ಮರಣೆ ಚಿರಕಾಲ ಸ್ಪೂರ್ತಿಸ್ಥಾನವಾಗಿ ಉಳಿಯುತ್ತದೆ. ಆ ರೋಮಾಂಚಕ ಗಾಥೆಯ ಪ್ರಮುಖ ಅಂಶಗಳನ್ನು ಈಗಿನ ಪೀಳಿಗೆಗೆ ಪರಿಚಯಿಸುವುದು ಈ ಕೃತಿ ‘ಅಗ್ನಿಪಥಿಕೆ ನಿವೇದಿತಾ’.

Specification

Additional information

author-name

book-no

141

isbn

81-7531-088-X

language

Kannada

published-date

2019

Main Menu

ಅಗ್ನಿಪಥಿಕೆ ನಿವೇದಿತಾ

100.00

Add to Cart