Book Description
ನರಕವಿಗಳು ಕೋಟ್ಯಾನುಕೋಟಿ ಇದ್ದಾರು, ಆದರೆ ವರಕವಿಗಳು ಕೋಟಿಗೊಬ್ಬರು ಸಿಗಲಾರರೆನೋ! ಅಂಥ ಕೋಟಿಗೊಬ್ಬ ವರಕವಿಗಳ ಪೈಕಿ ಶಿಶುನಾಳ ಶರೀಫರು ಒಬ್ಬರು. ಹರಕರುಣೆ ಹಾಗೂ ಗುರುಕೃಪೆಗಳನ್ನು ಪಡಕೊಂಡ ದಿವ್ಯಚೇತನ. ಪಂಡಿತ ಪರಾಮರ್ಶೆಗೆ ಹೆಸರಾದಂತೆ ಅನುಭಾವ ಶ್ರೀಮಂತಿಕೆಗೂ ಹೆಸರಾದ ಮನಗಂಡಿಯ ಬಸವಾನಂದ ಶ್ರೀಗಳು ಶರೀಫರ ಪದಗಳಲ್ಲಿ ಹುದುಗಿದ ತತ್ವರಸಾಯನವನ್ನು ಸರ್ವರಿಗೂ ತಿಳುಯುವ ಸರಳ ಭಾಷೆಯಲ್ಲಿ ಈ “ಶರೀಫ ರಸಾಯನ”ದಲ್ಲಿ ಉಣಬಡಿಸಿದ್ದಾರೆ; ಮಾತ್ರವಲ್ಲ, ಹನ್ನೆರಡು ಅಧ್ಯಾಯಗಳಲ್ಲಿ ವಿಸ್ತರಿಸಿ ಕ್ರಮಬದ್ಧಗೊಳಿಸಿದ್ದಾರೆ.
Reviews
There are no reviews yet.