Book Description
ವಚನಗಳ ಈಗಿನ ಓದಿನಲ್ಲಿರುವ ಕೊರತೆಯನ್ನು ತೆಗೆದು ತೋರಿಸಿ ಅವನ್ನು ಸರಿಪಡಿಸುವ ತುರ್ತು ಅಗತ್ಯ ಇಂದು ನಮ್ಮ ಮುಂದಿದೆ. ಈ ಕೃತಿಯಲ್ಲಿರುವ ಲೇಖನಗಳು ಈ ನಿಟ್ಟಿನಲ್ಲಿ ಬಾಲಗಂಧಾದರ ಸಂಶೋಧನಾ ತಂಡದ ಅಲ್ಪ ಕಾಣಿಕೆಗಳು. ನಾವು ಬೆಳೆದು ಬಂದ ಸಂಪ್ರದಾಯಗಳು ಸತ್ತ ಪಳೆಯುಳಿಕೆಗಳಲ್ಲ. ಅವನ್ನು ನಮಗೆ ಬೇಕಾದಂತೆ ಬೇಕಾಬಿಟ್ಟಿಯಾಗಿ ಉಪಯೋಗಿಸಿ ಬೀಸಾಡಲು ಬರುವುದಿಲ್ಲ. ಅವು ೨೧ ಶತಮಾನದಲ್ಲೂ ಕೂಡ ತಮ್ಮ ಸತ್ವವನ್ನು ಹಾಗೂ ಪ್ರಸ್ತುತತೆಯನ್ನು ಉಳಿಸಿಕೊಂಡಿವೆ ಎಂದು ನಮ್ಮಂತೆ ನಂಬುವವರನ್ನು ಉದ್ದೇಶಿಸಿ ಈ ಲೇಖನಗಳನ್ನು ಬರೆಯಲಾಗಿದೆ.
Reviews
There are no reviews yet.