Book Description
ಜನಸಾಮಾನ್ಯರ ಕನಿಷ್ಠಾಗತ್ಯಗಳ ಪೂರೈಕೆ, ಆರೋಗ್ಯ, ಶಿಕ್ಷಣ ಮೊದಲಾದ ಎಲ್ಲ ಕ್ಷೇತ್ರಗಳಲ್ಲೂ ಅಸ್ತವ್ಯಸ್ತತೆ ತುಂಬಿರುವುದಕ್ಕೆ ಕಾರಣ ಈಗಿನ ಅಭಿವೃದ್ಧಿಯ ಮೂಲ ಕಲ್ಪನೆಯಲ್ಲೇ ಹುದುಗಿಕೊಂಡಿರುವ ದೋಷಗಳು. ನೇರವಾಗಿಯೇ ಲಕ್ಷಾಂತರ ಜನರ ಜೀವಿಕೆಗೆ ಮುಳುವಾಗುತ್ತಿರುವ ಯೋಜನೆಗಳು ಅಭಿವೃದ್ಧಿಯ ಹೆಸರಿನಲ್ಲಿ ಜಾರಿಗೊಳ್ಳುತ್ತಿವೆ.
ಆರ್ಥಿಕವೆಂದು ಹೊರನೋಟಕ್ಕೆ ತೋರಿದರೂ ಇಂದು ನಡೆಯುತ್ತಿರುವ ಸಂಘರ್ಷ ಎರಡು ಭಿನ್ನ ಜಗದ್‌ದೃಷ್ಟಿಗಳ ನಡುವಣದ್ದು. ಆದ್ದರಿಂದಲೇ ಸಾಮಾಜಿಕ ಮೊದಲಾದ ಎಲ್ಲ ಕ್ಷೇತ್ರಗಳಲ್ಲೂ ಧ್ರುವೀಕರಣ ಎದ್ದುಕಾಣುತ್ತಿರುವುದು. ಈ ಭೂಮಿಕೆಯಲ್ಲಿ ಸಮಕಾಲೀನ ಆರ್ಥಿಕತೆಯನ್ನು ವಿಶ್ಲೇಷಿಸುವ ಪ್ರಯತ್ನವನ್ನು ಇಲ್ಲಿಯ ಪ್ರಬಂಧಗಳಲ್ಲಿ ಮಾಡಲಾಗಿದೆ; ಸ್ವದೇಶೀ ಕಾಯಾಚರಣೆಯ ಪ್ರಸ್ತುತತೆಯ ಪ್ರತಿಪಾದನೆಯೂ, ಸ್ವದೇಶೀ ಸಂಹಿತೆಯ ಹಲವು ಮುಖಗಳ ವಿವರಣೆಯೂ ಇಲ್ಲಿವೆ.
ಆರ್ಥಿಕತೆಯ ನಿಜ ಸ್ವರೂಪ, ಅದನ್ನು ರೂಪಿಸುತ್ತಿರುವ ಜಾಗತಿಕ ಶಕ್ತಿಗಳ ಹಿನ್ನೆಲೆ, ಈಗಿನ ಅಭ್ಯುದಯ ಸಿದ್ಧಾಂತಗಳ ಆಧಾರ ಪ್ರತಿಜ್ಞೆಗಳೊಡಗೂಡಿದ ಮಿಥ್ಯೆಗಳು, ಇಂದಿನೆಲ್ಲ ವಿಕೃತಿಗಳ ನಿವಾರಣೆಗೆ ಸ್ವದೇಶೀ ಜೀವನಕ್ರಮದ ಅನಿವಾರ್ಯತೆ – ಈ ಸಾಮಯಿಕ ವಿಷಯಗಳ ವಿಸ್ತರಿತ ಪ್ರತಿಪಾದನೆಯೇ ‘ಆರ್ಥಿಕತೆಯ ಎರಡು ಧ್ರುವ’.
Reviews
There are no reviews yet.