Book Description
ಮುಗ್ಧಮಕ್ಕಳ ಭವಿಷ್ಯವನ್ನು ಉಜ್ಜ್ವಲಗೊಳಿಸುವ ಹಾಗೂ ದೇಶದ-ಸಮಾಜದ ಉತ್ತಮ ಆಸ್ತಿಯಾಗುವಂತೆ ರೂಪಿಸುವ ಹೊಣೆಗಾರಿಕೆ ಪೋಷಕರದು ಹಾಗೂ ಶಿಕ್ಷಕರದೇ ಆಗಿರುತ್ತದೆ. ಮಗುವಿನ ವ್ಯಕ್ತಿತ್ವ ಪರಿಪೂರ್ಣವಾಗಿ ವಿಕಸಿತಗೊಳಿಸುವ ಅಡಿಗಲ್ಲಾದ ನೈತಿಕ ಶಿಕ್ಷಣವನ್ನು ಹಾಗೂ ಮಕ್ಕಳಲ್ಲಿ ಸುಪ್ತವಾಗಿರುವ ಪ್ರತಿಭೆಯನ್ನು ಗುರುತಿಸಿ, ಜಾಗೃತಗೊಳಿಸಿ, ರಾಷ್ಟ್ರೀಯ ಮನೋಭಾವವನ್ನು ಮೂಡಿಸುವ ಲಕ್ಷ್ಯದಿಂದ ಪುಸ್ತಕ ರೂಪುಗೊಂಡಿದೆ. ತರಗತಿಯ ವೇಳಾಪಟ್ಟಿಯಲ್ಲಿ ದೊರೆಯುವ ವಾರಕ್ಕೊಂದು ’ನೀತಿ ಅವಧಿ’ಯಲ್ಲಿ ಮಕ್ಕಳಿಗೆ ನೀಡಬಹುದಾದ ವಿಷಯಗಳ ಸಂಗ್ರಹ ಈ ಪುಸ್ತಕದ ಪ್ರಮುಖ ಅಂಶವಾಗಿದೆ. ಸತತವಾಗಿ ಮೂರು ವರ್ಷಗಳಲ್ಲಿ ಈ ಪುಸ್ತಕದಲ್ಲಿರುವ ಅಂಶಗಳನ್ನು ವಿದ್ಯಾರ್ಥಿ/ನಿಯು ಮನದಟ್ಟು ಮಾಡಿಕೊಂಡರೆ, ಅವರ ವ್ಯಕ್ತ್ತಿತ್ವವು ಸಂಪೂರ್ಣ ವಿಕಾಸ ಹೊಂದುವುದರಲ್ಲಿ ಸಂಶಯವಿಲ್ಲ.
ಸರ್ಕಾರಿ ಶಾಲೆಗಳಲ್ಲಿ ಓದುತ್ತಿರುವ, ಆರ್ಥಿಕವಾಗಿ, ಸಾಮಾಜಿಕವಾಗಿ ಹಿಂದುಳಿದ ಮಕ್ಕಳನ್ನು ಒಳಗೊಂಡು ಸಮಾಜದ ಎಲ್ಲ ಮಕ್ಕಳೂ ಉತ್ತಮ ಪ್ರಜೆಗಳಾಗಿ ರೂಪಗೊಳ್ಳಬೇಕು ಎಂಬ ಉದ್ದೇಶದಿಂದ ಕಾರ್ಯೋನ್ಮುಖವಾಗಿರುವ ’ಬಾಲಗೋಕುಲ’ ನಡೆಸಿದ ಹತ್ತಾರು ವರ್ಷಗಳ ಅನುಭವದಿಂದ ಈ ಪುಸ್ತಕವನ್ನು ರಚಿಸಲಾಗಿದೆ.
Reviews
There are no reviews yet.