ಇತಿ ನಿನ್ನ ಪ್ರೀತಿಯ ಅಪ್ಪ

40.0050.00 (-20%)

In stock

40.0050.00 (-20%)

Description

ಪ್ರೌಢವಯಸ್ಕರು ತಾವು ಆಪೇಕ್ಷಿಸಿದರೆ ಸಾಮಗ್ರಿಯನ್ನು ಕವನ, ಕಥನ, ಪ್ರಬಂಧ ಮೊದಲಾದ ಯಾವುದೇ ಮಾಧ್ಯಮಗಳ ಮೂಲಕ ಸಂಗ್ರಹಿಸಿಕೊಳ್ಳಬಲ್ಲರು. ಆದರೆ ಎಳೆವಯಸ್ಸಿನವರಲ್ಲಿ ಆ ಮಟ್ಟದ ಕ್ಷಮತೆ ಇರಲಾರದು. ಆದರೆ ಉದಾತ್ತ ಮೌಲ್ಯಗಳನ್ನು ಪರಿಚಯಿಸಬೇಕಾದದ್ದು ಕಿರಿವಯಸ್ಸಿನಲ್ಲಿಯೇ. ಆ ವಯಸ್ಸಿನಲ್ಲಿ ಮನಸ್ಸಿನ ಸ್ಪಂದನವೂ ಕುತೂಹಲವೂ ಮಕ್ಕಳಲ್ಲಿ ತುಂಬಿರುತ್ತವೆ. ಈ ಹಂತದಲ್ಲಿ ಅವರನ್ನು ರೂಪಿಸುವುದು ಸುಲಭ ಸಾಧ್ಯ. ಈ ಹಿನ್ನೆಲೆಯಲ್ಲಿ ಎಳೆವಯಸ್ಸಿನ ಮಕ್ಕಳಲ್ಲಿ ಧ್ಯೇಯನಿಷ್ಠ ಜೀವನ ವಿಧಾನದ ಬಗೆಗೆ ಆಸಕ್ತಿಯನ್ನು ನಿರ್ಮಿಸುವ ಉದ್ದೇಶದಿಂದ ಈ ಕಿರುಪುಸ್ತಕ ರಚಿತವಾಗಿದೆ.

ವ್ಯಕ್ತಿತ್ವ ವಿಕಾಸಕ್ಕೆ ಹಾಗೂ ನೆಮ್ಮದಿ ಬದುಕಿಗೆ ಬೇಕಾಗುವ ಕೆಲವು ಸಲಹೆ, ಸೂತ್ರಗಳನ್ನು ತಂದೆಯೊಬ್ಬರು ಮಗಳಿಗೆ ಬರೆದ ಬೋಧಕ ಪತ್ರಗಳ ರೂಪದಲ್ಲಿ ಈ ಪುಸ್ತಕದಲ್ಲಿ ನೀಡಲಾಗಿದೆ. ಭಗವದ್‌ಗೀತೆ, ಉಪನಿಷತ್ತುಗಳು, ಬೈಬಲ್ ಮೊದಲಾದ ಗ್ರಂಥಗಳ ಮೂಲದ್ರವ್ಯಗಳನ್ನು ಬಳಸಿಕೊಂಡು ಈ ಪುಸ್ತಕವನ್ನು ಬರೆಯಲಾಗಿದೆ. ಬದುಕಿನಲ್ಲಿ ಎಲ್ಲರೂ ಅನುಸರಿಸಬಹುದಾದ ಕ್ರಿಯಾತ್ಮಕವಾದ ಸರಳ ಸೂತ್ರಗಳು ಇಲ್ಲಿವೆ.

Specification

Additional information

book-no

79

isbn

81-86595-47-3

author-name

published-date

2010

language

Kannada

Main Menu

ಇತಿ ನಿನ್ನ ಪ್ರೀತಿಯ ಅಪ್ಪ

40.0050.00 (-20%)

Add to Cart