Book Description
ಕನ್ನಡದ ಬೌದ್ಧಿಕ ಜಗತ್ತಿನಲ್ಲಿ ವಿಚಿತ್ರ ಪರಿಸ್ಥಿತಿಯಿದೆ. ಸಮಾಜವಾದಿ, ಸಾಮ್ಯವಾದಿ, ಮಹಿಳಾವಾದಿ, ದಲಿತವಾದಿ ಚಿಂತನೆಗಳನ್ನು ಮಂಡಿಸಲು ವೇದಿಕೆಗಳಿವೆ. ಆ ವಿಚಾರಗಳಿಗೆ ಹಲವು ಪ್ರತಿಷ್ಠಿತ ಸಂಸ್ಥೆ, ವೇದಿಕೆಗಳಲ್ಲಿ ಸನ್ಮಾನವಿದೆ. ಇವೆಲ್ಲವನ್ನೂ ಸದಾ ತನ್ನ ಚರ್ಚೆಯ ತೆಕ್ಕೆಯಲ್ಲಿ ತೆಗೆದುಕೊಂಡು ಜೊತೆಗೆ ತನ್ನ ನಂಬಿಕೆ ವೈಚಾರಿಕತೆಯನ್ನು ಪ್ರಕಟಿಸುತ್ತ ಬಂದಿರುವ ಸ್ಥೂಲವಾಗಿ ’ಭಾರತೀಯ’ ಎನ್ನಬಹುದಾದ ಚಿಂತನೆಗೆ ಕನ್ನಡದ ಬೌದ್ಧಿಕ ಜಗತ್ತಿನಲ್ಲಿ ಸಂವಾದ ಬಹಿಷ್ಕಾರವಿದೆ, ವೈಚಾರಿಕ ಅಸ್ಪೃಶ್ಯತೆ ಜಾರಿಯಲ್ಲಿದೆ.
ಮುಖ್ಯವಾಗಿ ಭಾರತೀಯತೆಯ ಹಲವು ಆಯಾಮಗಳನ್ನು ಜೀರ್ಣಿಸಿಕೊಂಡು ರೂಡಿಸಿಕೊಂಡಿರುವ ಒಂದು ವಿಚಾರಧಾರೆ ಭಾರತದಾದ್ಯಂತ ಪ್ರಚಲಿತವಿದೆ. ಕರ್ನಾಟಕದ ಹರ್ಡೇಕರ್ ಮಂಜಪ್ಪ, ಪಂ. ತಾರಾನಾಥ, ಕುದ್ಮುಲ್ ರಂಗರಾವ್, ಡಿ.ವಿ. ಗುಂಡಪ್ಪ, ಪಿ. ಕೋದಂಡರಾವ್, ಕೋ. ಚೆನ್ನಬಸಪ್ಪ, ಜಿ.ಪಿ. ರಾಜರತ್ನಂ, ಉತ್ತರ ಭಾರತದಲ್ಲಿ ರಾಹುಲ ಸಾಂಕೃತ್ಯಾಯನ, ಮಹಾತ್ಮ ಗಾಂಧಿ, ಕೆ.ಎಂ. ಮುನ್ಶಿ, ವಿನೋಬಾ, ಡಾ. ಸಂಪೂರ್ಣಾನಂದ, ಡಾ. ಲೋಹಿಯಾ, ಡಾ. ಅಂಬೇಡ್ಕರ್ – ಇವರ ವಿಚಾರಗಳು ಸಂಪೂರ್ಣವಾಗಿ ಸಾಮ್ಯವಾದಿಯಲ್ಲ. ಆರೆಸ್ಸೆಸ್ ಕೂಡ ಅಲ್ಲ. ಇಂತಹ ವಿಚಾರಧಾರೆಗಳನ್ನು ಹೀರಿಕೊಂಡಿರುವ ಸ್ವತಃ ಆರೆಸ್ಸೆಸ್ ಪ್ರಚಾರಕರಾಗಿರುವ ಡಾ. ಉಪೇಂದ್ರ ಶೆಣೈ ಅವರು ರಚಿಸಿರುವ ಕೃತಿ ಇದು. ಈ ಪುಸ್ತಕದಲ್ಲಿ ಮುಖ್ಯವಾಗಿ ಮೂರು ಕ್ಷೇತ್ರಗಳು ಚರ್ಚೆಗೊಂಡಿವೆ – (೧) ಸಾಮಾಜಿಕ ನವನಿರ್ಮಾಣ ೨) ರಾಜಕೀಯ ನವನಿರ್ಮಾಣ ೩) ಆರ್ಥಿಕ ನವನಿರ್ಮಾಣ.
Reviews
There are no reviews yet.