ಶ್ರೀ ಅರವಿಂದ – ವೇದಾರ್ಥದ ಅವಗಾಹನೆ

12.00

Out of stock

12.00

Description

ಭಾರತದ ಸಂಸ್ಕೃತಿಗೆ ಮೂಲ ಅಧಿಷ್ಠಾನವಾದದ್ದು ವೇದ. ನಮ್ಮ ಎಲ್ಲ ಜ್ಞಾನಶಾಖೆಗಳಿಗೂ ಮೂಲವನ್ನು ವೇದಗಳಲ್ಲಿ ಗುರುತಿಸುತ್ತೇವೆ. ಅನ್ಯದೇಶಗಳ ವಿದ್ವದ್‌ವಲಯಗಳೂ ವೇದದ ಮಹತ್ತ್ವವನ್ನು ಗುರುತಿಸಿವೆ. ಅದರೆ ವೇದಗಳ ಸಮ್ಯಕ್ಕಾದ ಅರ್ಥವನ್ನು ನಾವು ಗ್ರಹಿಸಿದ್ದೇವೆ- ಎಂದು ಘೋಷಿಸಬಲ್ಲ ಸಾಹಸಿಗಳು ಯಾರೂ ಇಲ್ಲ. ಕೆಲವು ವೇದಶಾಖೆಗಳ ಅನೂಚ್ಚಾರಣೆ ಉಳಿದಿದೆ. ಆದರೆ ವೇದಗಳ ಆಶಯವೂ ಅರ್ಥವ್ಯಾಪ್ತಿಯೂ ಇಂದಿಗೂ ಸವಾಲಾಗಿಯೇ ಇವೆ.

ಈ ಹಿನ್ನೆಲೆಯಲ್ಲಿ ವೇದದ ಅರ್ಥಾವಗಾಹನೆಗೆ ಸಂಬಂಧಿಸಿದಂತೆ ನಮ್ಮ ಕಾಲದ ಶ್ರೇಷ್ಠ ದ್ರಷ್ಟಾರರಾದ ಮಹರ್ಷಿ ಅರವಿಂದರು ತಮ್ಮ ‘Life Divine’, ‘Integral Yoga’, ‘On the Veda’, ಮೊದಲಾದ ಪಥದರ್ಶಕ ಕೃತಿಗಳ ಮೂಲಕ ಅಸಾಧಾರಣ ಒಳನೋಟಗಳನ್ನು ನೀಡಿದ್ದಾರೆಂಬುದು ಸುವಿದಿತ. ವೇದಾರ್ಥ ನಿರ್ಣಯದ ಬಗೆಗೆ ಅವರು ಗಾಢ ಚಿಂತನೆಯನ್ನು ಜೀವಮಾನದುದ್ದಕ್ಕೂ ಮುಂದುವರಿಸಿದ್ದರು. ಭಾರತೀಯ ಸಂಸ್ಕೃತಿಗೂ ನಾಗರಿಕತೆಗೂ ವೇದಗಳ ಕೊಡುಗೆ, ವೇದಗಳ ಅರ್ಥವನ್ನು ನಿರ್ಣಯಿಸುವುದಕ್ಕೆ ಬೇಕಾದ ನಾಗರಿಕತೆಗೂ ವೇದಗಳ ಕೊಡುಗೆ, ವೇದಗಳ ಅರ್ಥವನ್ನು ನಿರ್ಣಯಿಸುವುದಕ್ಕೆ ಬೇಕಾದ ಪ್ರಾಗ್ಭೂಮಿಕೆ, ವೇದಮಂತ್ರಗಳ ಮತ್ತು ಉಪನಿಷತ್ತುಗಳ ಅರ್ಥ ವೈಶಾಲ್ಯ – ಈ ಅಂಶಗಳನ್ನು ಕುರಿತು ತಮ್ಮ ಹೊಸ ಚಿಂತನೆಯನ್ನು ಒಳಗೊಂಡ ಸಮಗ್ರ ಗ್ರಂಥವೊಂದನ್ನು ಮಹರ್ಷಿ ಅರವಿಂದರು ಅನೇಕ ದಶಕಗಳ ಹಿಂದೆ ಬರೆಯಲು ಉಪಕ್ರಮಿಸಿದ್ದರು. ಅದರ ಮೊದಲ ಅಧ್ಯಾಯವೇ ‘A Chapter for a Work on Veda’. ವಿಷಯದ ಮಹತ್ತ್ವದಿಂದಾಗಿ, ಮಹರ್ಷಿ ಅರವಿಂದರು ನೀಡಿರುವ ಅಪೂರ್ವ ಒಳನೋಟಗಳಿಂದಾಗಿ ಈ ಬರಹ ವ್ಯಾಪಕವಾದ ಗಮನ ಸೆಳೆದಿದೆ.

Specification

Additional information

book-no

43

isbn

81-86595-08-2

author-name

published-date

1999

language

Kannada

Main Menu

ಶ್ರೀ ಅರವಿಂದ - ವೇದಾರ್ಥದ ಅವಗಾಹನೆ

12.00