Book Description
ಕುರುಡು ನಂಬಿಕೆ, ಮೌಢ್ಯ, ಅಸಮಾನತೆ, ಜಾತೀಯ ವಿಷಮತೆ ಇವುಗಳನ್ನು ಮೀರಿ ನಿಂತು, ದೇವರು ಒಬ್ಬನೇ, ದಯಾಮಯನೂ ಸಮಾನದೃಷ್ಟಿಯುಳ್ಳವನೂ ಸರ್ವಶಕ್ತನೂ ನಿರಾಕಾರನೂ ಆದ ಆತನನ್ನು ಭಕ್ತಿಯಿಂದ ಜಪಿಸಿ, ಸಕಲ ಮಾನವರೂ ಸಮಾನರೆಂದು ಭಾವಿಸಿ, ಧರ್ಮದಿಂದ ನಡೆಯಬೇಕೆಂದು ಬೋಧಿಸುವುದೇ ಸಿಖ್ ಪಂಥದ ಮೂಲತತ್ತ್ವ. ತಿರಸ್ಕೃತ ಮತ್ತು ಪದದಲಿತರಲ್ಲಿ ಮಾನವತೆಯ ಅನುಭೂತಿಯನ್ನುಂಟು ಮಾಡುವುದೇ ಈ ಪಂಥ/ಮತದ ಪರಮೋದ್ದೇಶ. ಇಂತಹ ಹತ್ತನೆಯ ಮತ್ತು ಕೊನೆಯ ಗುರು ಗೋವಿಂದಸಿಂಹರ ಜೀವನವನ್ನು ಆಧರಿಸಿ ಬರೆದ ನಾಟಕವೇ ‘ಧರ್ಮವೀರ ಗುರು ಗೋವಿಂದಸಿಂಹ’.
Reviews
There are no reviews yet.