ರಾಷ್ಟ್ರೋತ್ಥಾನದ ಇಂದಿನ ಆದ್ಯತೆಗಳು

130.00140.00 (-7%)

In stock

ಡಾ|| ಕೆ ಎಸ್ ನಾರಾಯಣಾಚಾರ್ಯ

130.00140.00 (-7%)

Description

ಭಾರತವು ಇಂದು ಅನೇಕ ಗಂಡಾಂತರಗಳನ್ನೆದುರಿಸುತ್ತಿದೆ. ಒಂದೆಡೆ ಬಾಹ್ಯಶತ್ರುಗಳು, ಇನ್ನೊಂದೆಡೆ ಆಂತರಿಕ ಶತ್ರುಗಳು. ದಿಕ್ಕುಗೆಟ್ಟ ಹಿಂದುಳಿದ ಸಮುದಾಯಗಳು. ರಾಷ್ಟ್ರಭಕ್ತಿಹೀನ ರಾಜಕೀಯ ಪಕ್ಷಗಳು. ಅಧಿಕಾರಕ್ಕಾಗಿ ದೇಶದ ಹಿತಾಸಕ್ತಿಗೆ ಬೆಂಕಿ ಹಚ್ಚುವ ನಾಯಕರು, ಹಿಂಬಾಲಕರು, ಪುಂಡ ಸೇನೆಗಳು, ಉಗ್ರರ ಗುಪ್ತದಳಗಳು, ಹಿಂಸಾವಿಹಾರಿಗಳು, ದುಡ್ಡಿಗಾಗಿ ಓಟು ಮಾರಿಕೊಂಡು, ಮುಂಬರುವ ಆಪತ್ತುಗಳನ್ನು ಕಾಣದೇ, ತಾತ್ಕಾಲಿಕ ಲಾಭಕ್ಕಾಗಿ ದೇಶದ್ರೋಹಕ್ಕೆ ಬದ್ಧರಾದ ಸಮುದಾಯಗಳು, ಜಾತಿದ್ವೇಷ ಎಂಬ ಉರಿಮಾರಿ, ಮೀಸಲಾತಿಯ ಹೆಸರಿನಲ್ಲಿ ನಾಶವಾಗುತ್ತಿರುವ ಸ್ವದೇಶಿ ಪ್ರತಿಭೆಗಳು, ತಿರುಚಿದ ನಮ್ಮ ಇತಿಹಾಸ ಪಠ್ಯಗಳು, ಸ್ವವಿಸ್ಮೃತಿಯಲ್ಲಿ ನಮ್ಮ ಪ್ರಾಚೀನ ಸಾಧನೆಗಳನ್ನು, ವೀರರನ್ನು ಮರೆತು ಇತರರ ಅಂಧಾನುಕರಣೆಯಲ್ಲಿ ಮುಳುಗಿದ ನಮ್ಮ ಯುವಸಮುದಾಯಗಳು, ಪ್ರಗತಿಯನ್ನು ವಿರೋಧಿಸಿ, ಬ್ರಿಟಿಷರು ಬಿಟ್ಟು ಹೋದಾಗಿನ ದುಃಸ್ಥಿತಿಯಲ್ಲೇ ಇರಬಯಸುವ ಹತಾಶರು, ವಿದೇಶೀ ಶತ್ರುಗಳೊಡನೆ ಕೈಜೋಡಿಸಿ, ಸ್ವದೇಶ ದ್ರೋಹಕ್ಕೆ ಬದ್ಧರಾದ ರಾಜಕಾರಣಿಗಳು, ವಂಶಪಾರಂಪರ‍್ಯ ಅಧಿಕಾರಕ್ಕೆ ಅಂಟಿಕೊಂಡ ಪಟ್ಟಭದ್ರರು, ಒಂದಾಗಲು ಇಷ್ಟಪಡದ “ಮೈನಾರಿಟಿ”ಗಳನ್ನು ಒಲೈಸುತ್ತಾ, ದುಷ್ಟ ತುಷ್ಟೀಕರಣದ ದ್ರೋಹದಲ್ಲಿ, ಮೆಜಾರಿಟಿಯನ್ನೇ ತುಳಿಯುವ, “ಹಿಂದೂ” ಎಂದೊಡನೆ ಹೌಹಾರುವವರು, ಅದರಲ್ಲಿ “Soft-Hiduism” ಎಂಬ, ಸಲ್ಲದ ಮಾರೀಚಭ್ರಾಂತಿಯ ಆರಾಧಕರು – ಇನ್ನೂ ನಾನಾ ತೆರದ ವಿದ್ರೋಹಿಗಳ ಜಾಲದಲ್ಲಿ ಸಿಕ್ಕುಬಿದ್ದ ನಮ್ಮ ಈ ದೇಶವನ್ನು ಬಿಡಿಸುವುದು ಹೇಗೆ ? ಈ ಕೃತಿಯನ್ನು ಓದಿ.

Main Menu

ರಾಷ್ಟ್ರೋತ್ಥಾನದ ಇಂದಿನ ಆದ್ಯತೆಗಳು

130.00140.00 (-7%)

Add to Cart