Book Description
’ದಂಡಿನಃ ಪದಲಾಲಿತ್ಯಮ್’ ಎಂಬುದು ಸಂಸ್ಕೃತ ಕಾವ್ಯಸಂಪ್ರದಾಯದಲ್ಲಿ ಪ್ರಸಿದ್ಧವಾದ ಮಾತು. ದಂಡಿಯ ಗದ್ಯಕೃತಿ ದಶಕುಮಾರಚರಿತೆ ಈ ಮಾತಿಗೆ ಜ್ವಲಂತ ನಿದರ್ಶನ. ಹತ್ತು ಹುಡುಗರ ವಿಚಿತ್ರ ಕತೆಗಳೇ ಈ ಕೃತಿಯ ವಿಷಯ. ಹತ್ತಾರು ಊರುಗಳ ರಾಜಕೀಯ ಸನ್ನಿವೇಶ, ಜನತೆಯ ಸ್ವಭಾವ, ಪರಿಸರ ಮೊದಲಾದವುಗಳನ್ನು ಈ ಕಥೆ ಒಳಗೊಂಡಿದೆ. ಸೊಗಸಾದ ಈ ಕಥೆಗಳ ಓದುವಿಕೆ ಸಾಂಸ್ಕೃತಿಕ ಆಭೋಗವೇ ಸರಿ.
Reviews
There are no reviews yet.