Book Description
ಭಾರತದಲ್ಲಿ ಅಸಹಿಷ್ಣುತೆ ಇದೆ ಎಂದು ಅತ್ತು ಇಲ್ಲಿರಲಾಗದೇ ಪಾಕಿಸ್ತಾನಕ್ಕೆ ಹೋಗಬಯಸಿದರೆ ಅವರಿಗೆ ಅಲ್ಲಿ ಸ್ವಾಗತವಿದೆಯೇ? ಈ ಮತಿಗೇಡಿಗಳಿಗೆ ಕಳೆದ ಏಳು ದಶಕಗಳಲ್ಲಿ ಪಾಕಿಸ್ತಾನದಲ್ಲೇನಾಗಿದೆ ಎನ್ನುವದರ ಅರಿವೇ ಇಲ್ಲ. ಪಾಕಿಸ್ತಾನದ ನಿರ್ಮಾಣದಲ್ಲಿ ಮತ್ತು ಅದರ ಪ್ರಾರಂಭಿಕ ಇತಿಹಾಸದಲ್ಲಿ ಪ್ರಮುಖ ಪಾತ್ರ ವಹಿಸಿದವರು ಈಗಿನ ಭಾರತದ ಪ್ರದೇಶಗಳಿಂದ ವಲಸೆಹೋದ ಮುಸ್ಲಿಮರು. ದುರಂತವೆಂದರೆ ಅವರನ್ನು ತಮ್ಮವರೆಂದು ಸ್ಥಳೀಯರು ಇಂದಿಗೂ ಒಪ್ಪಿಕೊಂಡಿಲ್ಲ. ಅವರನ್ನು “ಮೊಹಾಜ಼ೆರ್” ಅಂದರೆ ನಿರಾಶ್ರಿತರು ಎಂದು ಕರೆಯಲಾಗುತ್ತದೆ. ಅವರ ವಿರುದ್ಧ ಹಿಂಸಾಚಾರ ನಿರಂತರವಾಗಿ ರಾಷ್ಟ್ರದ ಎಲ್ಲೆಡೆ ಸಾಗುತ್ತಿದೆ.ಭಾರತಕ್ಕೆ ಹಿಂದಿರುಗಿಹೋಗಿ ಎಂದು ಅವರಿಗೆ ಹೇಳಲಾಗುತ್ತಿದೆ. ಅವರ ಹಿತರಕ್ಷಣೆಗೆಂದೇ ಹುಟ್ಟಿಕೊಂಡ ರಾಜಕೀಯ ಪಕ್ಷ “ಮೊಹಾಜ಼ೆರ್ ಕ್ವಾಮಿ ಇತ್ತೆಹಾದ್”. ಅದರ ನಾಯಕ ಅಲ್ತಾಫ್ ಹುಸೇನ್, ವಿರೋಧಿಗಳಿಗೆ 1983 ರಷ್ಟು ಹಿಂದೆಯೇ ನೀಡಿದ ತಿರುಗೇಟು ಇಂದಿಗೂ ಪ್ರಸ್ತುತ: “ಪಾಕಿಸ್ತಾನವನ್ನು ನಿರ್ಮಿಸಿದವರು ನಾವು. ಭಾರತಕ್ಕೆ ಹಿಂದಿರುಗಿ ಹೋಗೆ ಎಂದು ನೀವು ನಮಗೆ ಹೇಳುತ್ತಿದ್ದೀರಿ. ಆಯಿತು ಹೋಗುತ್ತೇವೆ. ಹೋಗುವಾಗ ಪಾಕಿಸ್ತಾನವನ್ನೂ ಜತೆಗೆ ಕೊಂಡೊಯ್ಯುತ್ತೇವೆ.”
Reviews
There are no reviews yet.