ಗಾಂಧೀಯ ಅರ್ಥಶಾಸ್ತ್ರ

360.00

ಪ್ರೊ ಎಂ ಎಂ ಗುಪ್ತ

Book Description

ಸ್ವಾತಂತ್ರ್ಯ ಹೋರಾಟಕ್ಕೆ ನೇತೃತ್ವ ನೀಡಿ, ಬ್ರಿಟಿಷರೊಂದಿಗೆ ನಿರಂತರ ಸಂಘರ್ಷ ನಡೆಸುತ್ತಲೇ ಗಾಂಧಿಜೀ ಭಾರತೀಯರ ಸಮಾಜಜೀವನದ ಸುಧಾರಣೆಯ ಕಡೆಗೂ ಗಮನಹರಿಸಿದ್ದರು. ಭಾರತದ ಗ್ರಾಮಗಳು ಹೇಗಿರಬೇಕು?; ಕೃಷಿ-ಗುಡಿಕೈಗಾರಿಕೆಗಳು-ಕುಲಕಸುಬುಗಳ ಅಗತ್ಯ, ಮಹತ್ವ ಏನು?; ಭಾರತೀಯರ ಜೀವನಶೈಲಿಯಲ್ಲಿಯೇ ಅಂತರ್ಗತವಾಗಿರುವ ಗಳಿಕೆ-ಉಳಿಕೆಯ ಕಲ್ಪನೆಗಳೇನು?; ಜಗತ್ತು ಕೈಗಾರಿಕಾ ಕ್ರಾಂತಿಯಿಂದ ಪ್ರಭಾವಿತಗೊಂಡಿರುವ ಸಮಯದಲ್ಲಿ ಭಾರತೀಯರ ’ಅಭಿವೃದ್ಧಿ ಪಥ’ ಯಾವ ದಿಕ್ಕಿನೆಡೆಗೆ ಸಾಗಬೇಕು?; ದಿನದಿಂದ ದಿನಕ್ಕೆ ಹೊಸ ಹೊಸ ಸಂಶೋಧನೆ ಆವಿಷ್ಕಾರಗಳೊಂದಿಗೆ ಮುನ್ನುಗ್ಗುತ್ತಿರುವ ವಿಜ್ಞಾನ-ತಂತ್ರಜ್ಞಾನಗಳಿಗೆ ಭಾರತೀಯರು ಯಾವ ಪ್ರಮಾಣದಲ್ಲಿ ತೆರೆದುಕೊಳ್ಳಬೇಕು? – ಇತ್ಯಾದಿ ಅನೇಕ ಮುಖಗಳಲ್ಲಿ ಗಾಂಧಿಯವರ ಜಿಜ್ಞಾಸೆ ನಡೆದಿತ್ತು.
ಗಾಂಧಿಯವರ ಬರಹ-ಭಾಷಣ-ಪತ್ರೋತ್ತರಗಳ ಅಗಾಧ ಸಾಹಿತ್ಯರಾಶಿಯಲ್ಲಿ ಚೆದರಿಕೊಂಡಿದ್ದ ಆರ್ಥಿಕ ಚಿಂತನೆಗಳನ್ನೆಲ್ಲ ಒಂದೆಡೆ ಸೇರಿಸಿ, ವ್ಯಾಪಕ ವಿಶ್ಲೇಷಣೆಗೊಳಪಡಿಸಿರುವ ಕೃತಿ ಗಾಂಧೀಯ ಅರ್ಥಶಾಸ್ತ್ರ.

Reviews

There are no reviews yet.

Be the first to review “ಗಾಂಧೀಯ ಅರ್ಥಶಾಸ್ತ್ರ”

Your email address will not be published.

This site uses Akismet to reduce spam. Learn how your comment data is processed.