Book Description
ಪ್ರಚಲಿತ ಇತಿಹಾಸಕಥನಕ್ಕೂ ಖಚಿತ ಸಾಕ್ಷ್ಯಗಳಿಂದ ಹೊಮ್ಮುವ ಚಿತ್ರಕ್ಕೂ ನಡುವೆ ಹಲವೊಮ್ಮೆ ಎಷ್ಟು ಅಗಾಧ ಅಂತರ ಇರುತ್ತದೆ ಎಂಬುದಕ್ಕೆ ನಿಚ್ಚಳ ನಿದರ್ಶನ – ಟಿಪ್ಪುಚರಿತ್ರೆ. ಟಿಪ್ಪುಮೊಟ್ಟಮೊದಲ ಸ್ವಾತಂತ್ರ ಯೋಧ, ಮಹಾನ್ ರಾಷ್ಟ್ರೀಯವಾದಿ – ಎಂಬಂಥ ಚಿತ್ರಣಕ್ಕೆ ಆಧಾರಭೂತ ಇತಿಹಾಸದಿಂದ ಸಮರ್ಥನೆ ದೊರೆಯದು. ಭಾರತದ ಮೇಲೆ ಆಕ್ರಮಣ ನಡೆಸಿ ಮುಸ್ಲಿಂ ಆಳ್ವಿಕೆಯನ್ನು ಸ್ಥಾಪಿಸುವಂತೆ ಆಫಘನಿಸ್ತಾನ, ಪರ್ಷಿಯ, ತುರ್ಕಿ, ಅರೇಬಿಯದ ಪ್ರಭುಗಳಿಗೆ ಮೇಲಿಂದ ಮೇಲೆ ಪತ್ರಗಳನ್ನು ಬರೆಯುತ್ತಿದ್ದಟಿಪ್ಪುವನ್ನು ರಾಷ್ಟ್ರೀಯವಾದಿ ಎಂದು ಕೀರ್ತಿಸುವುದು ಹಾಸ್ಯಾಸ್ಪದ. ಟಿಪ್ಪುವಿನ ಮತಾಂಧತೆ ಜನಜನಿತ. ದೇವಾಲಯ ವಿಧ್ವಂಸ, ಬಲಾತ್ಕಾರದ ಮತಾಂತರದಲ್ಲಿ ಕ್ರೌರ್ಯದ ಹೊಸ ದಾಖಲೆಗಳನ್ನು ನಿರ್ಮಿಸಿದ. ಮೈಸೂರು ಸಂಸ್ಥಾನದ ಮೇಲಣ ಅಧಿಕಾರವನ್ನು ನ್ಯಾಯಬಾಹಿರವಾಗಿ ಟಿಪ್ಪುಸ್ವಾಯತ್ತ ಮಾಡಿಕೊಂಡದ್ದಷ್ಟೆ ಅಲ್ಲ, ತೀವ್ರ ಜನವಿರೋಧಿ ಎಂಬ ಕೀರ್ತಿ ಪಡೆದುಕೊಂಡ. ಭಾರತದ ಅನ್ಯ ಭಾಗಗಳ ಮುಸ್ಲಿಂ ನವಾಬರಿಂದಲೂ ತಾತ್ಸಾರಕ್ಕೆ ತುತ್ತಾಗಿದ್ದ ಟಿಪ್ಪುಬಿಟ್ಟುಹೋದ ನೆನಪು ಜನ-ಕಂಟಕನೆಂಬುದು ಮಾತ್ರ. ವಿಪುಲ ದಾಖಲೆ-ಉಲ್ಲೇಖಗಳೊಡನೆ ಟಿಪ್ಪುಕುರಿತ ವಾಸ್ತವತೆಯನ್ನು ದಾಖಲೆಗಳ ಆಧಾರದಲ್ಲಿ ಈ ಗ್ರಂಥದಲ್ಲಿ ವಿವರಿಸಲಾಗಿದೆ.
Reviews
There are no reviews yet.