Book Description
ವಸಿಷ್ಠರೊಂದಿಗೆ ಕಲಹ ಮಾಡಿ, ಸೋತು, ಕಡೆಗೆ ಅವರಿಂದಲೇ ನೀನು ಬ್ರಹ್ಮರ್ಷಿಯಾದೆ ಎನ್ನಿಸಿಕೊಂಡರು ವಿಶ್ವಾಮಿತ್ರರು. ಹೊಸ ನಕ್ಷತ್ರ ಸಮೂಹವನ್ನೇ ಸೃಷ್ಟಿಸಿ, ಬೇರೆ ಇಂದ್ರನನ್ನೆ ಸೃಷ್ಟಿಸುತ್ತೇನೆ ಎಂದು ದೇವತೆಗಳನ್ನೆ ನಡುಗಿಸಿದರು. ಹರಿಶ್ಚಂದ್ರನ ಸತ್ಯ ಪರೀಕ್ಷೆ ಮಾಡಿದರು. ಯಾಗಕ್ಕೆ ಬಲಿಯಾಗಬೇಕಾಗಿದ್ದ ಶುನಶ್ಶೇಫನನ್ನು ಉಳಿಸಿದರು. ಶ್ರೀರಾಮನಿಗೆ ದಿವ್ಯಾಸ್ತ್ರಗಳನ್ನು ಉಪದೇಶಿಸಿದ ಗುರು, ಅಹಲೆಯ ಉದ್ಧಾರಕ್ಕೆ ಕಾರಣರು, ಸೀತೆಯನ್ನು ಕೈಹಿಡಿಯಲು ಶ್ರೀರಾಮನನ್ನು ಮಿಥಿಲೆಗೆ ಕರೆದೊಯ್ದವರು. ಸಾಹಸ, eನ, ಕಾರುಣ್ಯಗಳ ತ್ರಿವೇಣಿ ಸಂಗಮ ಈ ಮಹಾಮಹಿಮರಲ್ಲಿ.
Reviews
There are no reviews yet.