Book Description
ವಿಶ್ವದಾದ್ಯಂತ ಹೆಸರು ಪಡೆದ ಪ್ರಮುಖ ವ್ಯಕ್ತಿಗಳಲ್ಲಿ ರವೀಂದ್ರನಾಥ ಠಾಕೂರರೂ ಒಬ್ಬರು. ಲೇಖಕ, ಸಂಗೀತಗಾರ, ಚಿತ್ರಗಾರ, ನಟ, ಶಿಕ್ಷಣತಜ್ಞ, ಸಮಾಜ ಸುಧಾರಕ, ದೇಶಪ್ರೇಮಿ ಹಾಗೂ ಮಾನವತಾಪ್ರೇಮಿ ಯಾಗಿ ಹೆಸರಾದ ಅವರು ಶಾಂತಿನಿಕೇತನದ ಮೂಲಕ ನೀಡಿದ ಕೊಡುಗೆ ದೇಶದ ಬೌದ್ಧಿಕ ಹಾಗೂ ಸಾಂಸ್ಕೃತಿಕ ಬಾಳನ್ನು ಶ್ರೀಮಂತಗೊಳಿಸಿದೆ. ನಾಗರಿಕತೆಯುಳ್ಳ ಎಲ್ಲ ರಾಷ್ಟಗಳಲ್ಲಿಯೂ ಇವರ ಹೆಸರನ್ನು ಕೇಳದವರಿಲ್ಲ; ಇವರ ಗ್ರಂಥಗಳನ್ನು ಓದದವರೂ ಇಲ್ಲ. ಇವರಿಂದ ಭಾರತದ ಕೀರ್ತಿ ಹೆಚ್ಚಾಯಿತು. ಸ್ವಾಮಿ ವಿವೇಕಾನಂದ ಮತ್ತು ಸ್ವಾಮಿ ರಾಮತೀರ್ಥರ ನಂತರದ ಕಾಲದ ಭಾರತದ ಸಾಂಸ್ಕೃತಿಕ ರಾಯಭಾರಿಯೆಂದರೆ ಠಾಕೂರರೇ.
೧೯೧೯ರ ಆರಂಭದಲ್ಲಿ ವಿಶ್ವಕವಿ ರವೀಂದ್ರನಾಥ ಠಾಕೂರರು ಬೆಂಗಳೂರಿನ ಅಮೆಚೂರ್ ಡ್ರಮ್ಯಾಟಿಕ್ ಅಸೋಸಿಯೇಷನ್ ಏರ್ಪಡಿಸಿದ್ದ ರಾಷ್ಟ್ರಮಟ್ಟದ ಲಲಿತಕಲಾ ಮಹೋತ್ಸವಕ್ಕೆ ಮುಖ್ಯ ಅಭ್ಯಾಗತರಾಗಿ ಆಗಮಿಸಿದುದು – ಬೆಂಗಳೂರಿನ ಇತಿಹಾಸದ ಒಂದು ಅತ್ಯಂತ ಮಹತ್ತ್ವದ ಪ್ರಸಂಗ. ಆ ಉತ್ಸವದ ಕೆಲವೇ ಸಾಲುಗಳ ಉಲ್ಲೇಖಗಳು ಹಿಂದೆ ಬಂದಿರುವುದುಂಟು. ಆದರೆ ಹೆಚ್ಚಿನ ವಿವರಗಳಾಗಲಿ ಠಾಕೂರರ ಅನ್ಯ ಪ್ರವಾಸಗಳ ವಿವರಗಳಾಗಲಿ ಸಮಗ್ರವಾಗಿ ಇದುವರೆಗೆ ದಾಖಲೆಗೊಂಡಿರಲಿಲ್ಲ. ಈ ಕೊರತೆಯನ್ನು ಮನಸ್ಸಿನಲ್ಲಿಟ್ಟುಕೊಂಡು, ಶೋಧನೆ ನಡೆಸಿ ಕರ್ನಾಟಕದಲ್ಲಿ ಠಾಕೂರರ ಪ್ರವಾಸಗಳ ಸಮಗ್ರ ಚಿತ್ರವನ್ನು ಈ ಪುಸ್ತಿಕೆಯಲ್ಲಿ ನೀಡಲಾಗಿದೆ.
Reviews
There are no reviews yet.