Book Description
ಎರಡೂ ದೇಶಗಳು ಒಮ್ಮತದಿಂದ, ಒಂದು ಲಿಖಿತ ಒಪ್ಪಂದದಿಂದ ಸೃಷ್ಟಿಸದೇ ಕೇವಲ ಭಾರತ ಏಕಪಕ್ಷೀಯವಾಗಿ, ರಹಸ್ಯವಾಗಿ, ಅಂತರತಾಷ್ಟ್ರೀಯ ರಾಜಕಾರಣದ ನೀತಿನಿಯಮ ಸಂಪ್ರದಾಯಗಳಿಗೆ ವಿರುದ್ಧವಾಗಿ ಗಡಿಯನ್ನು ’ಸೃಷ್ಟಿಸಿದ್ದು’ ಮತ್ತು ಅದರ ಬಗ್ಗೆ ಮಾತುಕತೆಗಳಿಗೆ ಅವಕಾಶವಿರಕೂಡದು ಎಂಬ ನಿಲುವನ್ನು ತಳೆದದ್ದು ಗಡಿ ಸಮಸ್ಯೆಯನ್ನು ಶಾಂತಿಯುತವಾಗಿ ಪರಿಹರಿಸಲಾಗದ ಹಂತಕ್ಕೆ ಕೊಂಡೊಯ್ದಿತು. ನೆಹರೂ ಸರಕಾರದ ಈ ನೀತಿ “ಭೌಗೋಳಿಕವಾಗಿ ಅವೈಜ್ಞಾನಿಕ, ಸಾಮರಿಕವಾಗಿ ಅತಾರ್ಕಿಕ, ರಾಜಕೀಯವಾಗಿ ಬೇಜವಾಬ್ದಾರಿಯುತ ಹಾಗೂ ಸೇನಾ ದೃಷ್ಟಿಯಿಂದ ಆತ್ಮಹತ್ಯೀಯ” ವಾಗಿತ್ತು. ಅದು ದುರಂತ ಹಾಗೂ ಅವಮಾನಗಳಲ್ಲಿ ಕೊನೆಗೊಳ್ಳುವುದು ನಿಶ್ಚಿತವೇ ಆಗಿತ್ತು. ಅಂತಿಮವಾಗಿ 1962ರಲ್ಲಿ ಆದದ್ದು ಅದೇ.
Reviews
There are no reviews yet.