Book Description
ಪ್ರಾಚೀನ ಹಾಗೂ ಸಮೃದ್ಧ ವೈದ್ಯಪದ್ಧತಿಯಾದ ಆಯುರ್ವೇದದಲ್ಲಿ ಮಹಿಳೆಯ ಸಂಪೂರ್ಣ ಆರೋಗ್ಯವನ್ನು ಕುರಿತಂತೆ ಕಳಕಳಿಯಿಂದ, ಅನೇಕ ಸಿದ್ಧಾಂತಗಳನ್ನೂ, ಚಿಕಿತ್ಸಾ ವಿಧಾನಗಳನ್ನೂ ರೂಪಿಸಿ ಹೇಳಿರುವುದು ಕಂಡುಬರುತ್ತವೆ. ಚರಕಸಂಹಿತೆ, ಸುಶ್ರುತಸಂಹಿತೆ, ಅಷ್ಟಾಂಗಹೃದಯ, ಭಾವಪ್ರಕಾಶ, ಸಾರಂಗಧರಸಂಹಿತೆ, ಯೋಗರತ್ನಾಕರ, ಮಾಧವನಿದಾನ ಮುಂತಾದ ಆಯುರ್ವೇದ ಗ್ರಂಥಗಳಲ್ಲಿ ಅವು ಸ್ಪಷ್ಟವಾಗಿ ಉಲ್ಲೇಖಗೊಂಡಿವೆ. ಇವು ಅತ್ಯಮೂಲ್ಯವಾಗಿದ್ದು, ಆಸಕ್ತಿಯಿಂದ ಬಳಸಿದರೆ ಆರೋಗ್ಯಭಾಗ್ಯ ನೀಡುವ ಅಮೃತವಾಕ್ಯಗಳಾಗಿವೆ. ಇವುಗಳನ್ನೆಲ್ಲ ಕ್ರೋಡೀಕರಿಸಿ, ಅವುಗಳಲ್ಲಿ ಅತ್ಯಂತ ಉಪಯುಕ್ತವಾದ ವಿಚಾರಗಳನ್ನು, ಓದುಗರಿಗೆ ಉಪಯೋಗವಾಗಲಿ ಎಂಬ ಸದುದ್ದೇಶದಿಂದ ಇಲ್ಲಿ ನೀಡಲಾಗಿದೆ. ಬೆಂಗಳೂರಿನ ಶುಭಾ ಆಯುರ್ವೇದಿಕ್ ಸೆಂಟರ್‌ನ ಮಹಿಳಾ ಮತ್ತು ಮಕ್ಕಳ ತಜ್ಞೆ ಡಾ|| ಶುಭಂಕರಿ ಪಿ. ರಾವ್ ಅವರು ತಮ್ಮ ಸೇವಾನುಭವಗಳ ಮೂಲಕ ಕ್ರೋಡೀಕರಿಸಿಕೊಂಡಿರುವ ವಿಚಾರಗಳಿಗೆ ಶ್ರೀಮತಿ ಗೀತಾ ಶ್ರೀನಿವಾಸನ್ ಅವರು ಬರಹರೂಪ ನೀಡಿದ್ದಾರೆ.
ಆರೋಗ್ಯ ಮತ್ತು ಸೌಂದರ್ಯ ಪ್ರತಿ ಹೆಣ್ಣಿನ ಮನದಾಳದ ಆಶಯ. ಆಯುರ್ವೇದವು ಹೆಣ್ಣಿನ ಆರೋಗ್ಯವನ್ನಷ್ಟೇ ಅಲ್ಲ, ಸೌಂದರ್ಯವೃದ್ಧಿಯನ್ನೂ ತುಂಬಿಕೊಡುತ್ತದೆ ಎಂಬ ಅಂಶವನ್ನೂ ಇಲ್ಲಿ ಕಾಣಬಹುದು. ಹೆಣ್ಣಿನ ಬಾಲ್ಯಾವಸ್ಥೆ, ಯೌವನ, ಗರ್ಭಿಣಿ, ಬಾಣಂತಿಚರ್ಯೆ, ಮಧ್ಯವಯಸ್ಸು, ರಜೋನಿವೃತ್ತಿ, ವೃದ್ಧಾಪ್ಯ – ಈ ಎಲ್ಲ ಹಂತಗಳ ಕುರಿತಾದ ಆರೋಗ್ಯ ಮಾಹಿತಿಗಳು ಈ ಕೃತಿಯಲ್ಲಿ ಲಭ್ಯ. ಸೌಂದರ್ಯವೃದ್ಧಿಗೂ ಆಯುರ್ವೇದೀಯ ಸುಲಭೋಪಾಯಗಳನ್ನು ಈ ಹೊತ್ತಗೆಯಲ್ಲಿ ಸೂಚಿಸಲಾಗಿದೆ.
Reviews
There are no reviews yet.