Book Description
ಈ ಕೃತಿಯು ಕಿರಿಯರಿಗಾಗಿ ಬರೆದದ್ದು. ಆದರೆ ಇಡೀ ಮಹಾಭಾರತದ ಕಥಾಹಂದರವನ್ನು ಕೆಲವೇ ಗಂಟೆಗಳಲ್ಲಿ ತಿಳಿದುಕೊಳ್ಳಬಯಸುವ ಎಲ್ಲ ವಯೋಮಾನದವರಿಗೂ ಈ ಪುಸ್ತಕ ನೆರವಾಗಬಲ್ಲದು.
ಹಿಂದಿನ ಕಾಲದ ಹಿರಿಯರ ಕಿರಿಯರ ಒಳ್ಳೆಯ ನಡೆಗಳೆಲ್ಲ ಒಂದಾಗಿ ನಮ್ಮಲ್ಲಿ ಸದ್ಗುಣಗಳ ರೂಪದಲ್ಲಿ ಮೈಗೂಡುವುದಕ್ಕೆ ’ಸಂಸ್ಕೃತಿ’ ಎನ್ನುತ್ತೇವೆ. ನಮ್ಮಲ್ಲಿ ಭೀಮನಂತಹ ಬಲಶಾಲಿಯಿದ್ದರು, ಧರ್ಮರಾಜನಂತಹ ನಿರ್ಮಲ ನ್ಯಾಯಶೀಲರಿದ್ದರು, ದ್ರೌಪದಿಯಂತಹ ಕೆಚ್ಚೆದೆಯ ಪತಿವ್ರತೆಯರಿದ್ದರು, ಶ್ರೀಕೃಷ್ಣನಂತಹ ದೇವಮಾನವರಿದ್ದರು. ಅವರೆಲ್ಲರ ಗುಣ, ಶಕ್ತಿಗಳು ನಮ್ಮಲ್ಲಿ ಮೈಗೂಡಿದರೆ ನಾವೂ ಅವರಂತೆ ನಾಡು ಮತ್ತು ನಾಡಿಗರ ಸೇವೆಯನ್ನು ಮಾಡಬಲ್ಲವರಾಗುವೆವು ಎಂಬ ಮನೋಭಾವ ಮೂಡಿಸಲು ಹಾಗೂ ಆ ’ಸಂಸ್ಕೃತಿ’ ಯ ಪರಿಚಯ ಮಾಡಿಕೊಡಲು ಈ ಸರಳ ಕನ್ನಡ ಮಹಾಭಾರತವನ್ನು ಪ್ರಕಟಿಸಲಾಗಿದೆ.
Reviews
There are no reviews yet.