Book Description
ಸ್ವತಂತ್ರ ಭಾರತದ ಸಂವಿಧಾನ ಶಿಲ್ಪಿಯಾಗಿದ್ದ ಡಾ|| ಬಾಬಾಸಾಹೇಬ ಅಂಬೇಡ್ಕರರ ಜನ್ಮ ಶತಮಾನೋತ್ಸವದ ವರ್ಷ (೨೦೦೬)ದಲ್ಲಿ ಹೊರತಂದ ಕೃತಿ ಇದು. ಡಾ|| ಅಂಬೇಡ್ಕರರನ್ನು ಅವರು ಹುಟ್ಟಿದ ಕುಲ ಮತ್ತು ಅವರು ಹೆಚ್ಚಿನ ಮಹತ್ತ್ವ ನೀಡಿ ಕೈಗೊಂಡ ಅಸ್ಪೃಶ್ಯತೆ ವಿರುದ್ಧ ಹೋರಾಟ – ಇವುಗಳಿಂದ ಮಾತ್ರ ಅಳೆಯುವುದು ಸರಿಯಲ್ಲ. ಅವರು ಸಮಾಜದ ಯಾವುದೋ ಒಂದು ವರ್ಗದ ನಾಯಕರಾಗಿದ್ದರು ಎನ್ನುವುದು ಅವರ ವ್ಯಕ್ತಿತ್ವದ ಬಿಂಬವಾಗಲಾರದು. ತತ್ಕಾಲೀನ ವಿವಿಧ ಸಾಮಾಜಿಕ, ರಾಜಕೀಯ ಸನ್ನಿವೇಶಗಳಿಂದ ಅವರನ್ನು ಪ್ರತ್ಯೇಕಗೊಳಿಸದೇ ಅವುಗಳನ್ನೇ ಹಿನ್ನೆಲೆಯಾಗಿರಿಸಿ ಅವರ ಬಗ್ಗೆ ಮಾಡಲಾಗುವ ಅಧ್ಯಯನ ವಾಸ್ತವಿಕತೆಗೆ ಹೆಚ್ಚು ಸಮೀಪ. ಮೇಲ್ನೋಟಕ್ಕೆ ಅವರು ಒಂದು ವರ್ಗದ ಹಿತಕ್ಕಾಗಿ ಹೋರಾಡಿರುವಂತೆ ಕಂಡರೂ, ಸಮಕಾಲೀನ ಮಿಕ್ಕ ಎಲ್ಲ ಸಾಮಾಜಿಕ, ರಾಜಕೀಯ ಮುಖಂಡರುಗಳಿಗಿಂತ ಭಿನ್ನವಾದ ಮತ್ತು ಹೆಚ್ಚಿನ ಹೊಣೆ ಅಂಬೇಡ್ಕರರ ಮೇಲಿತ್ತು. ಅವರು ಕೈಗೊಂಡ ಪ್ರತಿಯೊಂದು ನಿರ್ಣಯದಲ್ಲೂ ಒಟ್ಟು ದೇಶದ ಮತ್ತು ಸಮಾಜದ ಹಿತಕ್ಕೇ ಆದ್ಯತೆಯಿದ್ದುದನ್ನು ಅಂದಿನ ಸನ್ನಿವೇಶಗಳ ವಿವಿಧ ಆಯಾಮಗಳ ಹಿನ್ನೆಲೆಯಲ್ಲಿ ಈ ಪುಸ್ತಕದಲ್ಲಿ ವಿವರಿಸಲಾಗಿದೆ.
Reviews
There are no reviews yet.