Book Description
ಯುವಕರಲ್ಲಿ ದೇಶಭಕ್ತಿಯ ಕಿಚ್ಚು ಹೊತ್ತಿಸಿ, ಸ್ವಾತಂತ್ರ್ಯಯಜ್ಞದ ಜ್ವಾಲೆ ಧಗಧಗಿಸುವಂತೆ ಮಾಡಿದ ಸಾವರಕರ್ (1983-1966)ರ ಜೀವನ ಭಾರತದ ಸ್ವಾತಂತ್ರ್ಯ ಸಮರದ ರೋಮಾಂಚಕಾರಿ ಅಧ್ಯಾಯ. ಹುಟ್ಟಿನಿಂದ ಸಾವಿನವರೆಗೆ ಎಳ್ಳಷ್ಟೂ ಕಡಮೆಯಾಗದ ಪ್ರಖರ ರಾಷ್ಟ್ರಭಕ್ತಿ ಸಾವರಕರ್‌ರ ವಿಶೇಷತೆ. ಸ್ವಾತಂತ್ರ್ಯ ಗಳಿಕೆಗಾಗಿ ಪ್ರಾಣಾರ್ಪಣೆಗೂ ಯುವಕರನ್ನು ಪ್ರೇರೇಪಿಸಿದ ಅವರು ಸ್ವಾತಂತ್ರ್ಯ ಉಳಿಕೆಗಾಗಿ, ಸೈನ್ಯದಲ್ಲಿ ಸೇರ್ಪಡೆಯಾಗುವಂತೆ ತರುಣರಿಗೆ ಕರೆ ನೀಡಿದ ವಾಸ್ತವವಾದಿ. ಬಾಲ್ಯದಲ್ಲಿ ಕವಿತೆಗಳಿಂದ, ಕಾಲೇಜು ದಿನಗಳಲ್ಲಿ ಮಿತ್ರಮಂಡಳಿಯಿಂದ, ತಾರುಣ್ಯದಲ್ಲಿ ಅಭಿನವ ಭಾರತದಿಂದ, ಲಂಡನ್‌ನಲ್ಲಿ ಭಾರತ ಭವನದ ಮೂಲಕ, ನಂತರ ಹಿಂದೂ ಮಹಾಸಭಾದ ಮೂಲಕ, ಅವರು ಸದಾ ಅರ್ಚಿಸಿದ್ದು ಭಾರತಮಾತೆಯನ್ನೇ; ಸ್ತುತಿಸಿದ್ದು ತಾಯಿ ಭಾರತಿಯನ್ನೇ; ಬಯಸಿದ್ದು ಸಶಕ್ತ ಭಾರತದ ನಿರ್ಮಾಣವನ್ನೇ. ಅಸ್ಪ್ರೃಶ್ಯತೆಯ ವಿರುದ್ಧ ಜಾಗೃತಿ ಮೂಡಿಸಿದಾಗ, ಪತಿತಪಾವನ ಮಂದಿರ ಸ್ಥಾಪನೆ ಮಾಡಿದಾಗ, ವಿದೇಶೀ ವಸ್ತುಗಳನ್ನು ಬಹಿರಂಗವಾಗಿ ಸುಟ್ಟುಹಾಕಿದಾಗ, ಭಾರತೀಯ ಭಾಷೆಗಳ ಬಳಕೆಗೆ ಆಗ್ರಹಪಡಿಸಿದಾಗ ಅವರ ದೃಷ್ಟಿಯಿದ್ದುದು ಹಿಂದೂ ಸಮಾಜದ ಏಳಿಗೆಯಲ್ಲಿಯೇ. ತಾಯಿ ಭಾರತಿಯ ಈ ಮಹಾನ್ ಸುಪುತ್ರನನ್ನು ನುಡಿನಮನಗಳಿಂದ, ಭಾವ ಜಾಗರಣದಿಂದ ’ಅಪ್ರತಿಮ ದೇಶಭಕ್ತ ಸ್ವಾತಂತ್ರ್ಯವೀರ ಸಾವರಕರ್’ ಕೃತಿಯಲ್ಲಿ ಅರ್ಚಿಸಲಾಗಿದೆ.
eevishal (verified owner) –
One of the best, as you goes on reading you will be knowing and feeling the pain that we have red wrong books in school days and we have wasted our entire life for all these years.dont think much just buy and gift and read well