Book Description
ವೇದಕಾಲದಲ್ಲಿಯೇ ಪ್ರಸಿದ್ಧಿ ಪಡೆದ ವಿಶ್ವಾಮಿತ್ರರದು ಅಪೂರ್ವ ಅಲೌಕಿಕ ವ್ಯಕ್ತಿತ್ವ. ಸಾಮಾನ್ಯ ಕ್ಷತ್ರಿಯ ರಾಜನಾಗಿದ್ದವರು ಸುದೀರ್ಘ ಕಾಲದ ಅಸಾಧಾರಣ ತಪಸ್ಸಾಧನೆಯಿಂದ ಬ್ರಹ್ಮರ್ಷಿ ಪದವಿಗೆ ಏರಿದವರು ಅವರು. ಈ ಸಾಧನೆಯ ಜೊತೆಜೊತೆಗೇ ಅನೇಕ ಕ್ಲೇಶಗ್ರಸ್ತ ರಾಜರುಗಳನ್ನು ಉದ್ಧರಿಸಿದವರು. ತ್ರಿಶಂಕು, ಶುನಃಶೇಫ, ಹರಿಶ್ಚಂದ್ರ, ಅಂಬರೀಷ ಆಖ್ಯಾನಗಳ ಕೇಂದ್ರವ್ಯಕ್ತಿ ವಿಶ್ವಾಮಿತ್ರರೇ. ಅಲ್ಲದೆ ವೇದೋಕ್ತ ಉಪಾಸನಾಮಾರ್ಗದ ಸಾರವಾದ ಗಾಯತ್ರೀ ಮಹಾಮಂತ್ರದ ದ್ರಷ್ಟಾರರು ಅವರು. ಋಷಿಪರಂಪರೆಯಲ್ಲಿ ಯಾಜ್ಞವಲ್ಕ್ಯರು, ವಸಿಷ್ಠರ ನಂತರ ಪ್ರಮುಖ ಸ್ಥಾನ ಸಂದಿರುವುದು ವಿಶ್ವಾಮಿತ್ರರಿಗೇ.
ವಿಶ್ವಾಮಿತ್ರರ ಜೀವಿತ ಕಾರ್ಯದ ಉಲ್ಲೇಖಗಳು ವೇದಗಳಲ್ಲಿ, ಪುರಾಣಗಳಲ್ಲಿ, ಅನ್ಯ ವಾಙ್ಮಯದಲ್ಲಿ ಲಭ್ಯವಿವೆ. ಆದರೆ ವಿವರಗಳು ಬೇರೆ ಬೇರೆ ಕಡೆ ಬೇರೆ ಬೇರೆ ರೀತಿ ಇವೆ. ಇಂತಹ ವಿಪುಲ ಸಾಮಗ್ರಿಯನ್ನು ಕ್ರೋಡೀಕರಿಸಿದ, ಸಂದರ್ಭೋಚಿತ ವಿಮರ್ಶೆಯೊಡಗೂಡಿದ. ಸಂಕ್ಷಿಪ್ತವೂ, ಸುಲಭಗ್ರಾಹ್ಯವೂ ಆದ ವಿಶ್ವಾಮಿತ್ರರ ಆಕರ್ಷಕ ಜೀವನ ಕಥನವನ್ನು ’ವೀರ ವಿಶ್ವಾಮಿತ್ರ’ದಲ್ಲಿ ಕಾಣಬಹುದು.
Reviews
There are no reviews yet.