ಕುಟಿಲ ಸಾಚಾರ್ ವರದಿ

10.00

Book Description

ಬಹುಸಂಖ್ಯಾತ ಹಿಂದೂಸಮಾಜವನ್ನು ಎಲ್ಲ ರೀತಿಗಳಲ್ಲಿಯೂ ಅಪಮಾನಿಸಲು ಕಂಕಣ ಬದ್ಧವಾದಂತಿರುವ ಡಾ|| ಮನಮೋಹನ್ ಸಿಂಗ್ – ಶ್ರೀಮತಿ ಸೋನಿಯಾಗಾಂಧಿ ಸಾರಥ್ಯದ ಯು.ಪಿ.ಎ. ಸರಕಾರದ ಹಿಂದೂ ವಿರೋಧಿ ಕಾರ್ಯಾಚರಣೆಗಳ ಸರಣಿಯ ಮೈಲಿಗಲ್ಲು ಮುಸ್ಲಿಂ ಸಮುದಾಯವನ್ನು ಓಲೈಸುವ ಏಕೈಕ ಉದ್ದೇಶದಿಂದ ೨೦೦೫ರಲ್ಲಿ ರಚಿತಗೊಂಡ ಸಾಚರ್ ಸಮಿತಿ, ಅದರ ತರ್ಕಹೀನ ಶಿಫಾರಸುಗಳ ಮುಸ್ಲಿಂ ಪರ ಕಾರ್ಯಾನ್ವಯ, ಹಿಂದೂಗಳೆಂಬ ಒಂದೇ ಕಾರಣದಿಂದ ಈ ಸಮುದಾಯದ ಬಡವರ್ಗಗಳ ಬಗೆಗೆ ಪೂರ್ಣದುರ್ಲಕ್ಷ್ಯ, ಇದೆಲ್ಲಕ್ಕೂ ಶಿಖರಪ್ರಾಯವಾಗಿ ಸರ್ವಾಂಗೀಕೃತ ನ್ಯಾಯಶಾಸ್ತ್ರಕ್ಕೂ ಸಂವಿಧಾನಕ್ಕೂ ಸಂಪರ್ಣ ವ್ಯತಿರಿಕ್ತವಾದ ’ಕಮ್ಯುನಲ್ ವಯೊಲೆನ್ಸ್’ಮಸೂದೆಯ ಮಂಡನೆ – ಇವು. ಈ ಜಾಡಿನ ನಿರಂತರ ಧೋರಣೆಗಳಿಗೆ ನಾಗರಿಕರು ದೇಶಾದ್ಯಂತ ತೀಕ್ಷ್ಣವಾಗಿ ಪ್ರತಿಭಟಿಸಲೇಬೇಕಾದ ಅನಿವಾರ್ಯತೆಯನ್ನು ಯುಪಿಎ ಸರಕಾರ ನಿರ್ಮಿಸಿತ್ತು. ಇದನ್ನು ಸ್ವಾತ್ರಂತ್ಯೋತ್ತರ ಕಾಲದಲ್ಲಿ ಒದಗಿರುವ ಅತ್ಯಂತ ಗಂಭೀರ ಸವಾಲು ಎಂದು ಪರಿಗಣಿಸಬೇಕಾಗಿದೆ. ಈ ಬೆಳವಣಿಗೆಗಳ ಭಯಾನಕತೆಯ ಆರಿವು ಮೂಡಿಸುವ ಹಾಗೂ ಜನಜಾಗೃತಿಗೆ ನೆರವಾಗಲೆಂಬ ಉದ್ದೇಶದಿಂದ ಈ ಕಿರು ಪುಸ್ತಿಕೆಯನ್ನು ಹೊರತರಲಗಿದೆ. ಈ ಎಲ್ಲ ಈಚಿನ ಬೆಳವಣಿಗೆಗಳಿಗೆ ಚಾಲನೆ ನೀಡಿದುದು ಸಾಚಾರ್ ಸಮಿತಿಯ ವರದಿ. ಆ ವರದಿ ಪೂರ್ಣ ಅವೈಜ್ಞಾನಿಕವೂ ಕಪೋಲಕಲ್ಪಿತ ವಾದಗಳನ್ನು ಆಧರಿಸಿದುದೂ ಆಗಿದೆ ಎನ್ನುವತ್ರಯಸ್ಥ ತಜ್ಞರ ವಿಶ್ಲೇಷಣೆ ಈ ಪುಸ್ತಿಕೆಯಲ್ಲಿದೆ.

Additional information

Book No

ISBN

Moola

Author Name

Published Date

Language

Reviews

There are no reviews yet.

Be the first to review “ಕುಟಿಲ ಸಾಚಾರ್ ವರದಿ”

Your email address will not be published.

This site uses Akismet to reduce spam. Learn how your comment data is processed.