Book Description
ಶ್ರೀರಾಮಕೃಷ್ಣರ ಶಿಷ್ಯವರೇಣ್ಯ ಸ್ವಾಮೀ ವಿವೇಕಾನಂದರು ಅದ್ವಿತೀಯ ದೇಶಭಕ್ತ, ಸುಧಾರಕ ಹಾಗೂ ಸಂಘಟಕ; ಮಾತ್ರವಲ್ಲ, ರಾಷ್ಟ್ರೀಯ ಪುನರುತ್ಥಾನದ ಶಕ್ತಿಗಳನ್ನು ಹೊಡೆದೆಬ್ಬಿಸಿ, ಅಜ್ಞಾತವಾಗಿದ್ದ ನಮ್ಮ ನಾಡಿನ ರಾಷ್ಟ್ರೀಯ ಪುನರುತ್ಥಾನಕ್ಕೆ ಹಾದಿ ಸುಗಮಗೊಳಿಸಿದ ಅಗ್ರಗಣ್ಯ. ರಾಷ್ಟ್ರದ ಪ್ರಾಣಬಿಂದುವಾದ ಧರ್ಮದ ಕಡೆಗೆ ದೇಶದ ಮನಸ್ಸನ್ನು ಸೆಳೆದು ಪುನರುಜ್ಜೀವಿತ ಭಾರತದ ಅಡಿಗಲ್ಲನ್ನು ಅಚಲವೆನಿಸುವಂತೆ ನೆಟ್ಟವರು ಅವರು. ಅವರ ವಿಚಾರಗಳು ಸರ್ವತೋಮುಖ. ಅವರ ಲೇಖನ ಹಾಗೂ ಪ್ರವಚನಗಳು ಲೌಕಿಕ ಮತ್ತು ಆಧ್ಯಾತ್ಮಿಕ ಕ್ಷೇತ್ರಗಳೆರಡನ್ನೂ ಒಳಗೊಂಡಿದೆ. ಪ್ರಸ್ತುತ ಈ ಪುಸ್ತಕದಲ್ಲಿ ರಾಷ್ಟ್ರದ ಉಜ್ಜ ಲ ಭವಿಷ್ಯ ನಿರ್ಮಾಣಕ್ಕಾಗಿ ನಮ್ಮನ್ನು ಉತ್‌ಸ್ಫೂರ್ತಗೊಳಿಸುವ ಸಂಗತಿಗಳು ಅಡಕಗೊಂಡಿವೆ.
Reviews
There are no reviews yet.