Book Description
ಮುಸ್ಲಿಂ ಮತ್ತು ಬ್ರಿಟಿಷರ ಆಕ್ರಮಣವನ್ನು ಎದುರಿಸಿ ಓಡಿಸಲು, ಸ್ವತಂತ್ರರಾಗಲು ಸಾಧ್ಯವಾಯಿತಾದರೂ, ಘಾಸಿಗೊಂಡ ಹಿಂದೂ ಸಮಾಜವು ಅರಗಿಸಿಕೊಳ್ಳಲಾಗದಂಥ ಮಾನಸಿಕ ಮತ್ತು ಬೌದ್ಧಿಕ ವಾರಸಿಕೆಯನ್ನು ಬಿಟ್ಟುಹೋಗುವಲ್ಲಿ ಮುಸ್ಲಿಂ ಮತ್ತು ಬ್ರಿಟಿಷ್ ಆಕ್ರಮಣಕಾರಿಗಳು ಯಶಸ್ವಿಯಾಗಿದ್ದಾರೆ. ಅಂತರರಾಷ್ಟ್ರೀಯ ದುಷ್ಟಶಕ್ತಿಗಳೊಂದಿಗೆ ಸಕ್ರಿಯವಾಗಿ ಜೊತೆಗೂಡುವ ಮೂಲಕ ದುರ್ಬಲಗೊಂಡಿರುವ ಹಿಂದೂ ಸಮಾಜವು ಸರಿದೂಗಿಸಲಾಗದ ಪ್ರಮಾಣದಲ್ಲಿ ಈ ವಾರಸಿಕೆ ಕಾರ್ಯನಿರ್ವಹಿಸುತ್ತಿದೆ. ಇವುಗಳು ತಮ್ಮದೇ ಒಂದು ಒಕ್ಕೂಟವನ್ನು ರಚಿಸಿಕೊಂಡು ಹಿಂದೂ ಸಮಾಜವನ್ನು ತನ್ನ ಅಧೀನದಲ್ಲಿ ಇಟ್ಟುಕೊಂಡಿವೆ.
ಮುಸಲ್ಮಾನರು ಬಿಟ್ಟುಹೋಗಿರುವ ಶೇಷ ಇಸ್ಲಾಮೀಕರಣ, ಬ್ರಿಟಿಷರು ಬಿಟ್ಟುಹೋಗಿರುವ ಕ್ರೈಸ್ತಮತ ಮತ್ತು ಮೆಕಾಲೆವಾದ ಹಾಗೂ ಅಂತಿಮವಾಗಿ ತಮ್ಮೊಳಗೇ ಜಗಳವಾಡುತ್ತಿದ್ದರೂ ಹಿಂದುಗಳ ವಿರುದ್ಧ ಹೋರಾಡಲು ಇವು ರೂಪಿಸಿಕೊಂಡಿರುವ ಸಂಯುಕ್ತ ರಂಗ – ಇವುಗಳ ಪಾತ್ರ ಹಾಗೂ ಅಂತರರಾಷ್ಟ್ರೀಯ ಶಕ್ತಿಗಳೊಡನೆ ಅವುಗಳ ಮೈತ್ರಿಯನ್ನು ಒಂದೊಂದಾಗಿ ಈ ಪುಸ್ತಕದಲ್ಲಿ ವಿಶ್ಲೇಷಿಸಲಾಗಿದೆ.
Reviews
There are no reviews yet.