Book Description
ಆಯುರ್ವೇದ ಎಂಬ ಹೆಸರು ಜನಸಾಮಾನ್ಯರಲ್ಲಿ ಸುರಕ್ಷೆಯ ಭರವಸೆ ಮೂಡಿಸುತ್ತದೆ. ಆಯುರ್ವೇದ ಔಷಧಿಗಳು ’ಕ್ಷೇಮಕರವಾದ ಔಷಧಿ’ ಎಂಬ ಭಾವನೆ ಅನೇಕ ವರ್ಷಗಳಿಂದಲೂ ಇದೆ. ಮಾತ್ರವಲ್ಲ, ಇತ್ತೀಚಿನ ದಿನಗಳಲ್ಲಿ ಆಯುರ್ವೇದದ ಬಗೆಗೆ ಹೆಚ್ಚುಹೆಚ್ಚು ಕುತೂಹಲ ಹಾಗೂ ಆಸಕ್ತಿ ಬೆಳೆಯುತ್ತಿದೆ. ಇಂತಹ ಸಂದರ್ಭದಲ್ಲಿ ಜನಸಾಮಾನ್ಯರಿಗೆ ಅರ್ಥವಾಗುವಂತೆ ಸುಲಭ ಸರಳ ಭಾಷೆಯಲ್ಲಿ ಆಯುರ್ವೇದ ವಿಚಾರಗಳ ಖಜಾನೆಯನ್ನು ತೆರೆದಿಡುವ ಬರಹಗಳ ಅಗತ್ಯವಿದೆ. ಆ ನಿಟ್ಟಿನಲ್ಲಿ ಆಯುರ್ವೇದ ಸಂಗಾತಿ ಒಂದು ವಿಶೇಷ ಪ್ರಯತ್ನ.
ಸುಮಾರು ೩೫ ವರ್ಷಗಳಿಂದ ಆಯುರ್ವೇದ ವೈದ್ಯವೃತ್ತಿಯೊಂದಿಗೆ ವೈದ್ಯಸಾಹಿತಿಯೂ ಆಗಿರುವ ಡಾ|| ವಿ.ಆರ್. ಪದ್ಮನಾಭರಾವ್ ಅವರು ಆಯುರ್ವೇದದ ಕುರಿತು ಕನ್ನಡದ ಸುಪ್ರಸಿದ್ಧ ಪತ್ರಿಕೆಗಳಿಗೆ ಬರೆದ ಆಯ್ದ ಲೇಖನಗಳ ಸಂಗ್ರಹವೇ- ಆಯುರ್ವೇದ ಸಂಗಾತಿ.
Reviews
There are no reviews yet.