Book Description
ಈ ಪುಸ್ತಕವು ಹಲವಾರು ರೋಗಗಳಿಗೆ ಸಿದ್ಧವಾದ ಔಷಧಿಗಳ ಕೈಪಿಡಿಯಾಗಿದೆ. ಇದರಲ್ಲಿ ಸಾಮಾನ್ಯ ರೋಗಗಳನ್ನು ಗುಣಪಡಿಸುವ ವಿವಿಧ ಚಿಕಿತ್ಸೆ ಬಗ್ಗೆ ಮಾಹಿತಿ ಇದೆ. ಜ್ವರ, ಭೇದಿ, ವಾಂತಿ, ಹೊಟ್ಟೆನೋವು, ತಲೆನೋವು ಸೊಂಟನೋವು, ಕೆಮ್ಮು, ದಮ್ಮು, ಮುಟ್ಟುನೋವು, ಸಂಧಿನೋವು ಮುಂತಾದವುಗಳ ಬಗ್ಗೆ ಮನೆಮದ್ದುಗಳಿವೆ. ಇವೆಲ್ಲವೂ, ಅಲರ್ಜಿಯನ್ನುಂಟು ಮಾಡುವ ಆಧುನಿಕ ಪದ್ಧತಿಗಳಂತೆ ಅಲ್ಲ. ಬದಲಿಗೆ, ಯಾವುದೇ ಪಾರ್ಶ್ವ ಪರಿಣಾಮಗಳಿಲ್ಲದ, ಕಡಮೆ ಖರ್ಚಿನಲ್ಲಿ ದೊರೆಯುವ ಮನೆಮದ್ದುಗಳಾಗಿದ್ದು, ಸಾಮಾನ್ಯ ಜನರಿಗೂ ಎಟುಕುವಂತಹವು. ಇವುಗಳಿಂದ ರೋಗಗಳನ್ನು ಗುಣಪಡಿಸಿ ಆರೋಗ್ಯವನ್ನು ಕಾಪಾಡಿಕೊಂಡು ಮನುಷ್ಯನು ನೂರುವರ್ಷ ಬದುಕಬಹುದು.