Book Description
ಜಗತ್ತನ್ನೆಲ್ಲ ಸಮೂಲ ಪರಿವರ್ತಿಸಲು ಹೊರಟ ಕಮ್ಯೂನಿಸಂ ಎಪ್ಪತ್ತನೇ ವರ್ಷಗಳಲ್ಲಿ ಎಲ್ಲೆಡೆ ನೆಲ ಕಚ್ಚತೊಡಗಿತು. ‘ಸಮಾಜವಾದಿ ಕ್ರಾಂತಿ’ ಸಹಜ ಜನಾಂದೋಲನಗಳ ಪ್ರವಾಹದಲ್ಲಿ ಕೊಚ್ಚಿ ಹೋಗತೊಡಗಿತು. ಹಿಂದಿನ ಉದಾತ್ತ ಸಾಂಸ್ಕೃತಿಕ ಪರಂಪರೆಯನ್ನು ತೊರೆದದ್ದರಿಂದಾಗಿಯೇ ರಷ್ಯಾಕ್ಕೆ ಅಧೋಗತಿ ಬಂದಿತು. ರಷ್ಯದ ಅಧ್ಯಕ್ಷ ಮಿಖಾಯ್ಲ್ ಗೋರ್ಬಚೇವ್ ತಮ್ಮ ‘ಗ್ಲಾಸ್ ನಾಸ್ಟ್’ (ಮುಕ್ತ ಧೋರಣೆ) ಮತ್ತು ‘ಪೆರೆಸ್ತ್ರೋಯಿಕಾ’ (ಪುನರ್ವಿರಚನೆ) ನೀತಿಯನ್ನು ಕಾರ್ಯಗತಗೊಳಿಸತೊಡಗಿದ ಮೇಲೆ ಇಡೀ ಕಮ್ಯೂನಿಸ್ಟ್ ಜಗತ್ತೇ ಕಂಪನಕ್ಕೆ ಒಳಗಾಯಿತು. ಈ ಹಿನ್ನೆಲೆಯಲ್ಲಿ ಕಮ್ಯೂನಿಸಂನ ಉಗಮ, ಪ್ರಸಾರ, ಅವಸಾನಗಳ ಕುರಿತ ಚಾರಿತ್ರಿಕ ಮಾಹಿತಿಯನ್ನು ನಿರೂಪಿಸಿರುವ ಗ್ರಂಥ ‘ಅವಸಾನದತ್ತ ಕಮ್ಯೂನಿಸಂ’.
Reviews
There are no reviews yet.