ಮಹಾಸಂನ್ಯಾಸಿ

100.00

Book Description

ಶ್ರೀ ಶಂಕರಾಚಾರ್ಯರು ಘನವಿದ್ವಾಂಸರು, ವೇದವೇದಾಂಗ ಪಾರಂಗತರು, ಅದ್ಭುತ ವಾಗ್ಮಿ ಹಾಗೂ ಪ್ರಚಂಡ ಸಂಕಲ್ಪಶಕ್ತಿಯುಳ್ಳವರು. ಶಂಕರರು ಜಗತ್ತಿಗೆ, ಅದರ ಸಮಸ್ಯೆಗಳಿಗೆ ಬೆನ್ನು ತಿರುಗಿಸಲು ಸಂನ್ಯಾಸ ಸ್ವೀಕರಿಸಲಿಲ್ಲ. ಅವುಗಳಿಗೆ ಎದೆಗೊಟ್ಟು ಹೋರಾಡಲು, ವಿಜಯದುಂದುಭಿ ಬಾರಿಸಲು ನಿರ್ಧರಿಸಿ ಹೊರಟರು. ಅದಕ್ಕಾಗಿ ವ್ಯಕ್ತಿಗತ ಜಂಜಡಗಳಿಂದ ಬಿಡಿಸಿಕೊಂಡು ಜಗತ್ತಿನ ಜಂಜಡ ಹತ್ತಿಸಿಕೊಂಡರು. ದೇಶ ಹಾಗೂ ಸಮಾಜಕ್ಕೆ ಕವಿದ ದುರ್ದೆಸೆಯನ್ನು ದೂರಗೊಳಿಸಲು ತಮ್ಮ ಜ್ಞಾನದ ಖಡ್ಗ ಹಿರಿದರು. 

ಶಂಕರಾಚಾರ್ಯರ ಜೀವನದ ಪವಾಡ, ಚಮತ್ಕಾರಗಳನ್ನು ವಿವರಿಸುವ ಅನೇಕ ಗ್ರಂಥಗಳಿವೆ. ಆದರೆ, ಸಹಸ್ರಾವಧಿ ಮೈಲಿಗಳ ಉದ್ದಗಲದ ದೇಶದಲ್ಲಿ ಸಂಚರಿಸುವಾಗ ಹತಾಶತೆ, ಶಿಥಿಲತೆ ತಾಂಡವವಾಡುತ್ತಿದ್ದ ಕೋಟಿಕೋಟಿ ಜನರ ಜೀವನದಲ್ಲಿ ಶ್ರದ್ಧೆ ಹುಟ್ಟಿಸಿ, ಹೊಸ ಮನೋಬಲ ಕಟ್ಟಿ ಬೆಳೆಸಿದ ಅವರ ಭವ್ಯೋಜ್ವಲ ಪವಾಡವೇ ಈ ಪುಸ್ತಕದ ಕಥಾವಸ್ತು. ನಿರಾಶೆ, ಆದರ್ಶಹೀನತೆಗಳ ನಡುವೆ ಇರುವ ಇಂದಿನ ತರುಣರೂ ಶಂಕರರಿಂದ ಸತ್ಪ್ರೇರಣೆ ಪಡೆದು ಮಹತ್ಕಾಯರ್ಗಳ ಸಾಧನೆಗೆ ನಡುಕಟ್ಟಬೇಕೆಂಬುದು ಈ ಪುಸ್ತಕದ ಉದ್ದೇಶ.

Additional information

Book No

Author Name

Published Date

Language

ISBN

Reviews

There are no reviews yet.

Be the first to review “ಮಹಾಸಂನ್ಯಾಸಿ”

Your email address will not be published.

This site uses Akismet to reduce spam. Learn how your comment data is processed.