Book Description
ಹೈದರಾಬಾದ್ ವಿಮೋಚನಾ ಚಳವಳಿ ಹಲವು ಅಧಿಷ್ಠಿತ ವಲಯಗಳು ಹೇಳುತ್ತ ಬಂದಿರುವಂತೆ ಕೇವಲ ಒಂದು ರಾಜವ್ಯವಸ್ಥೆಯ ವಿರುದ್ಧ ನಡೆದ ಹೋರಾಟವಾಗಿರಲಿಲ್ಲ. ಅದು ಪ್ರಮುಖವಾಗಿ ಮತಾಂಧರ ದಮನಶಾಹಿಯ ವಿರುದ್ಧ ದೇಶಭಕ್ತರು ನಡೆಸಿದ ಸಂಘರ್ಷ. ಆಡಳಿತ, ಶಾಸಕಾಂಗ, ಶಿಕ್ಷಣ – ಎಲ್ಲ ಜನಜೀವನ ಕ್ಷೇತ್ರಗಳನ್ನು ಆವರಿಸಿದ್ದ ಇಸ್ಲಾಮೀ ಆವೇಶ; ನಿಜಾಮ ಪೋಷಿತಿತ್ತೇಹಾದ್ ಸಂಘಟನೆಯ ಮತಾಂತರ ಅಭಿಯಾನ, ರಜಾಕರ ಪಡೆಗಳು ನಡೆಸಿದ ಕೊಲೆ-ಸುಲಿಗೆ-ಲೂಟಿ-ಆಸ್ತಹರಣ-ಮಾನಹರಣ ಸರಣಿ; ರಜಾಕಾರರ ಪಾಶವೀ ಆಕ್ರಮಣದ ವಿರುದ್ಧ ಹಿಂದೂ ಜನತೆಯನ್ನು ಸಂಗಟಿಸಿ ಶೌರ್ಯ-ಸಾಹಸ ಮೆರೆದ ಚೇತನಗಳ ವೀರಗಾಥೆ; ಆ ಸಂಘರ್ಷದಲ್ಲಿ ಭಾಗವಹಿಸಿದ ಹಲವರು ಪ್ರಮುಖರೇ ನೀಡಿರುವ ವೃತ್ತಕಥನ; ಅಂತಿಮವಾಗಿ ಸರ್ದಾರ್ ಪಟೇಲ್ ಮತ್ತು ಕೆ.ಎಂ. ಮುನ್ಶಿ ಅವರ ಮತ್ಸದ್ದಿತನ ಹಾಗೂ ಸೇನಾ ಕಾರ್ಯಾಚರಣೆಯ ಫಲವಾಗಿ ನಿಜಾಮ ಪ್ರಭುತ್ವದ ಶರಣಾಗತಿ; ಹೈದರಾಬಾದ್ ವಿಮೋಚನಾ ಚಳವಳಿಯ ತಾತ್ತ್ವಿಕ ವಿಶ್ಲೇಷಣೆ; ಆ ಇತಿಹಾಸದ ಯಥಾರ್ಥಗ್ರಹಣದ ಇಂದಿನ ಪ್ರಸ್ತುತತೆ; – ಇವು ಈ ಗ್ರಂಥದ ವಿಷಯ ಸಾಮಗ್ರಿ.
Reviews
There are no reviews yet.