Book Description
ಸ್ವಾತಂತ್ರ್ಯ ಸಂಗ್ರಾಮದಲ್ಲಿ ಕ್ರಾಂತಿಕಾರಿಗಳು ಗುಲಾಮಗಿರಿಯ ವಿರುದ್ಧ ಬಂಡೆದ್ದರು. ಪಿಸ್ತೂಲು ಹಿಡಿದರು, ಬಾಂಬ್ ಸಿಡಿಸಿದರು. ಭಾರತ ಮಾತೆಯನ್ನು ಸ್ವತಂತ್ರಗೊಳಿಸಲು ಉನ್ಮತ್ತ ದೇಶಪ್ರೇಮ, ದೇಶಹಿತದ ತೀವ್ರ ತಳಮಳದಿಂದ ಸರ್ವತ್ಯಾಗಕ್ಕೂ ಅವರು ಸಿದ್ಧರಾದರು. ವಿನಮ್ರ ಸಮರ್ಪಣೆ, ಕಷ್ಟಸಹಿಷ್ಣುತೆ, ಸತತ ಪರಿಶ್ರಮ, ಅಸೀಮ ಸಾಹಸಗಳು ಅವರಿಂದ ಪ್ರಕಟಗೊಂಡವು. ಅಂಥ ಕ್ರಾಂತಿಕಾರಿಗಳ ಸಾಲಿನಲ್ಲಿ ಮುಂಚೂಣಿಯಲ್ಲಿ ನಿಲ್ಲುವವನು ಚಂದ್ರಶೇಖರ ಆಜಾದ್. ಸ್ವಾತಂತ್ರ್ಯ ಗಳಿಕೆಗಾಗಿ ಅರ್ಪಿತವಾದ ಆಜಾದನ ಜೀವನದಿಂದ ಸ್ಪೂರ್ತಿ ಸಿಕ್ಕು ನಮ್ಮ ನಾಡಿನ ಯುವಜನ ಸ್ವಾತಂತ್ರ್ಯದ ಉಳಿಕೆಗಾಗಿ ಶ್ರಮಿಸುವಂತಾಗಲಿ ಎಂಬ ಆಶಯದಿಂದ ರಚಿತವಾದ ರಾಜ್ಯ ಸಾಹಿತ್ಯ ಅಕಾಡೆಮಿ ಬಹುಮಾನ ವಿಜೇತ ಕೃತಿ ‘ಅಜೇಯ’.
Niranjan hegde –
ಅದ್ಭುತವಾದ ಪುಸ್ತಕ ಕೊನೆಯಲ್ಲಿ ಕಣ್ಣೀರು ತರಿಸುತ್ತದೆ.ಆಜಾದರ ಕುರಿತು ಸಮಗ್ರ ಮಾಹಿತಿಇರುವ ಕನ್ನಡದ ಶ್ರೇಷ್ಟ ಪುಸ್ತಕ