Book Description
ಶ್ರೀ ಅರವಿಂದರನ್ನು ಮಹಾಯೋಗಿಯೆಂದು ಲೋಕ ಚೆನ್ನಾಗಿ ಬಲ್ಲದು. ಆದರೆ ಅವರು ಎಂಥ ದೊಡ್ಡ ಯೋಗಿಗಳೋ ಅದಕ್ಕಿಂತಲೂ ದೊಡ್ಡ ಯೋಧರು ಎಂಬ ವಿಚಾರ ಬಹು ಜನರಿಗೆ ಗೊತ್ತಿಲ್ಲ. ಅದರಲ್ಲೂ ಸ್ವಾತಂತ್ರ್ಯೋತ್ತರದ ಪೀಳಿಗೆಗಂತೂ ಶ್ರೀ ಅರವಿಂದರ ಯೋಧಜೀವನ ತಿಳಿದೇ ಇಲ್ಲ. ಭರತಖಂಡದ ಪುನರುತ್ಥಾನದ ಆಕಾಂಕ್ಷೆಯಿದ್ದವರು, ಅದರಲ್ಲೂ ನಮ್ಮ ಯುವಪೀಳಿಗೆ, ಅವರ ಯೋಧಜೀವನವನ್ನು ತಿಳಿಯಬೇಕು. ಇಂದು ಸುತ್ತಮುತ್ತ ಮುತ್ತಿಕೊಂಡಿರುವ ಅನೈಕಮತ್ಯ, ಭಾಷಾದ್ವೇಷ, ಜಾತಿವೈಷಮ್ಯ, ನಿರಾಸೆ, ಅನೀತಿ ಮುಂತಾದ ಅನಿಷ್ಟ ಪರಿಸ್ಥಿತಿಯ ಅಂಧಕಾರದಿಂದ ಬೆಳಕಿನೆಡೆಗೆ ಕೈ ಹಿಡಿದು ನಡೆಸಿಕೊಂಡು ಹೋಗುವ ದಿವ್ಯಪುರುಷ ಶ್ರೀ ಅರವಿಂದರೆಂಬುದನ್ನು ಭಾರತೀಯರು ತಿಳಿಯಬೇಕು. ಈ ಗುರಿಯನ್ನಿಟ್ಟುಕೊಂಡು ರಚಿತವಾದ ಗ್ರಂಥ ‘ಸ್ವಾತಂತ್ರ್ಯಯೋಧ ಶ್ರೀ ಅರವಿಂದ’.
Reviews
There are no reviews yet.