Book Description
ದೇಶಭಾಷೆಯ ಉಜ್ಜೀವನ ಹಾಗೂ ಸಂಸ್ಕಾರಪ್ರಧಾನ ಸಾಹಿತ್ಯರಚನೆಯ ಮೂಲಕ ನವಭಾರತನಿರ್ಮಾಣಕ್ಕೆ ಮಾರ್ಗವನ್ನು ಹದಗೊಳಿಸಿದ ಬಂಕಿಮಚಂದ್ರ ಚಟ್ಟೋಪಾಧ್ಯಾಯ (1838-1994)ರ ಕಾದಂಬರಿಗಳಲ್ಲಿ ವಿಶಿಷ್ಟ ಸ್ಥಾನವನ್ನು ಪಡೆದಿರುವುದು ‘ಆನಂದಮಠ. 1770ರ ದಶಕದಲ್ಲಿ ಬಂಗಾಲದಲ್ಲಿ ಭೀಕರ ಕ್ಷಾಮವಿದ್ದಾಗ ಆ ದುರ್ಭರ ಸ್ಥಿತಿಯಲ್ಲಿಯೂ ಮ್ಲೇಚ್ಛ ಸರ್ಕಾರ ನಡೆಸುತ್ತಿದ್ದ ಅವರ್ಣನೀಯ ಶೋಷಣೆಗೆ ಪ್ರತಿಭಟಿಸಿ ಪ್ರಭುತ್ವದ ವಿರುದ್ಧ ಸಂತಾನ ಸಂತಾಲ ಇರಬಹುದೆ? ಸಂನ್ಯಾಸಿಗಳು ಸಂಘಟಿಸಿದ ಸಮರವೇ ‘ಆನಂದಮಠ’ದ ಕಥಾವಸ್ತು. ‘ಆನಂದಮಠ’ ಕಾದಂಬರಿಗೆ ಅಭೂತಪೂರ್ವ ಪ್ರಸಿದ್ಧಿ ದೊರೆತದ್ದು ಅದರಲ್ಲಿ ಬಂಕಿಮಚಂದ್ರರು ಅಳವಡಿಸಿದ (ಅದಕ್ಕೆ ಹಿಂದೆಯೇ ತಾವು ರಚಿಸಿದ್ದ) ‘ವಂದೇ ಮಾತರಂ’ ಗೀತದಿಂದ. ರಾಷ್ಟ್ರವೇ ತಾಯಿ, ರಾಷ್ಟ್ರವೇ ದುರ್ಗಾಮಾತೆ ಎಂಬ ಭಾವನೆಗೆ ಕಾವ್ಯರೂಪ ನೀಡಿರುವ ‘ವಂದೇ ಮಾತರಂ’ ದಶಕಗಳುದ್ದಕ್ಕೂ ಸ್ವಾತಂತ್ರ್ಯ ಹೋರಾಟಗಾರರ ರಣಘೋಷವಾಗಿ ಮೆರೆಯಿತು. ಚಿರಂತನ ಸ್ಫೂರ್ತಿಸ್ರೋತವಾಗಿ ಅದು ಜನಮಾನಸದಲ್ಲಿ ನೆಲೆನಿಂತಿದೆ. ಭಾರತೀಯ ಸಾಹಿತ್ಯದಲ್ಲಿ ಉನ್ನತ ಸ್ಥಾನ ಪಡೆದಿರುವ ‘ಆನಂದಮಠ’ ಕಾದಂಬರಿಯ ಹೊಸ ಅನುವಾದವನ್ನು ಈ ಪೀಳಿಗೆಯ ಓದುಗರಿಗಾಗಿ ಇಲ್ಲಿ ನೀಡಲಾಗಿದೆ.
Reviews
There are no reviews yet.