Book Description
ಸಂಸ್ಕೃತಿಯನ್ನು ಪ್ರಮುಖವಾಗಿ ಧಾರ್ಮಿಕ-ತತ್ತ್ವಶಾಸ್ತ್ರೀಯ ಭೂಮಿಕೆಯಿಂದ ದರ್ಶಿಸುವ ರೂಢಿ ಇದೆ. ಅದರಿಂದ ಕಿಂಚಿದ್ ಭಿನ್ನವಾಗಿ, ಪ್ರಮುಖವಾಗಿ ಚಾರಿತ್ರಿಕ-ಸಾಮಾಜಿಕ ನೆಲೆಯಿಂದ ಅವಲೋಕಿಸಿದಾಗ ಕಾಣುವ ಸಂಸ್ಕೃತಿ ಸ್ವರೂಪದ ಹಲವು ಮಗ್ಗಲುಗಳಿಗೆ ಗಮನ ಸೆಳೆಯುವ ಉದ್ದೇಶವನ್ನು ಒಳಗೊಂಡ ಪ್ರಬಂಧಗಳನ್ನು ’ಧ್ರುವಜಲ’ ಗ್ರಂಥದಲ್ಲಿ ಕಾಣಬಹುದು. ಆರೋಗ್ಯಕರ ಮಾನಸಿಕತೆಯುಳ್ಳವರಿಗೆ ಸುತ್ತಲೂ ದೃಷ್ಟಿ ಹಾಯಿಸಿದಾಗ ಅಭಿಮಾನಾಸ್ಪದ ಸಂಗತಿಗಳೇ ಕಾಣುತ್ತವೆ. ಆರ್ಥಿಕ ಸಂಪನ್ನತೆ ಅಥವಾ ತಂತ್ರಜ್ಞಾನಸಾಧನೆಯಲ್ಲಿ ಒಂದೊಮ್ಮೆ ಬೇರಾವುದಾದರೂ ರಾಷ್ಟ್ರವು ಹಿಂದೆಹಾಕೀತು. ಆದರೆ ಸೇವಾಮನೋಭಾವ, ತ್ಯಾಗಶೀಲತೆ, ಅಧ್ಯಾತ್ಮ ಪ್ರವಣತೆ ಮೊದಲಾದ ಉದಾತ್ತ ಗುಣಸಮುಚ್ಚಯಗಳು ಭಾರತದಲ್ಲಿ ಕಾಣುವಷ್ಟು ನಿಚ್ಚಳವಾಗಿ ಬೇರೆಡೆ ಕಾಣಲಾಗದು. ಭಾರತದ ನವೀಕರಣ ಸಾಮರ್ಥ್ಯದ ಮೂಲವೂ ಈ ಅತಿಶಯ ಗುಣಗಳೇ. ಈ ಅನನ್ಯ ಸಂಸ್ಕೃತಿಯ ಅಬಿವ್ಯಕ್ತಿಯ ಹಲವು ಸ್ಫುರಣಗಳತ್ತ ಬೆರಳು ಚಾಚಿ ತೋರಿಸುವ ಆಶಯದ ಪ್ರಬಂಧಗಳ ಸಂಕಲನವೇ ಧ್ರುವಜಲ.
Reviews
There are no reviews yet.