Book Description
ಮನುಷ್ಯ ಶರೀರಕ್ಕೆ ಪ್ರಾಣ ಹೇಗೋ ರಾಷ್ಟ್ರಕ್ಕೆ ಸಂಸ್ಕೃತಿ ಹಾಗೆ. ಭಾರತೀಯ ಸಂಸ್ಕೃತಿಯ ತಳಹದಿ ಏಕಾತ್ಮಕತೆ. ದೇಹ, ಮನಸ್ಸು, ಬುದ್ಧಿ, ಆತ್ಮ- ಇವುಗಳ ಒಟ್ಟು ಮುನ್ನಡೆಯೇ ಭಾರತೀಯ ಆದರ್ಶ. ಈ ಸಮಗ್ರ ಪ್ರಗತಿಗಾಗಿ ಯೋಜಿತವಾದದ್ದು ಭಾರತದ ಸಾಮಾಜಿಕ ವ್ಯವಸ್ಥೆ, ಪುರುಷಾರ್ಥ ಚತುಷ್ಟಯದ ಕಲ್ಪನೆ, ಇತ್ಯಾದಿ. ಮನುಷ್ಯಸಹಜ ಪ್ರವೃತ್ತಿಗಳ ಮೇಲೆ ಕಡಿವಾಣ ಹಾಕಿ, ಸುಖಸಾಧನೆ ಜೀವಹಿತವೂ ಆಗಬೇಕೆಂಬುದರತ್ತ ನಿರಂತರ ಗಮನ ಸೆಳೆಯುವ ಮೂಲತತ್ತ್ವವೇ ಧರ್ಮ ಎಂಬುದು ದಿ. ಪಂಡಿತ ದೀನದಯಾಳ ಉಪಾಧ್ಯಾಯರ ವಾದದ ಜಾಡು. ಅವರ ‘ರಾಷ್ಟ್ರಜೀವನ ಕೀ ದಿಶಾ’, ‘ರಾಷ್ಟ್ರಚಿಂತನ್’ ಎಂಬ ಗ್ರಂಥಗಳನ್ನೂ, ನಾಲ್ಕಾರು ಸಂದರ್ಭಗಳಲ್ಲಿ ಮಾಡಿದ ಉಪನ್ಯಾಸಗಳನ್ನೂ ಮತ್ತು ‘ಏಕಾತ್ಮಮಾನವತಾವಾದ್’ ಎಂದೇ ಶೀರ್ಷಿಕೆ ಪಡೆದ ಉಪನ್ಯಾಸಮಾಲಿಕೆಯನ್ನೂ ಆಧರಿಸಿದ್ದು ಈ ಗ್ರಂಥ.
Reviews
There are no reviews yet.