Book Description
ಡಾ. ಬಾಬಾಸಾಹೇಬರ ಮೇರುವ್ಯಕ್ತ್ತಿತ್ವದ ಔನ್ನತ್ಯ ಹಾಗೂ ಅವರ ಜೀವನಕಾಲದ ಬಹುಮುಖ ಆಯಾಮಗಳು, ದಲಿತ ಸಮುದಾಯದ ಏಳ್ಗೆಗಾಗಿ ಅವರು ನಡೆಸಿದ್ದ ಹೋರಾಟಗಳು, ಅವರ ಚಿಂತನೆಯ ಆಳ ಮತ್ತು ವಿಸ್ತಾರ, ಸಂವಿಧಾನ ರಚನೆಯ ಭೀಮಕಾರ್ಯ ಮತ್ತು ಭೌದ್ಧಮತ ಸ್ವೀಕರಿಸಿದ ಅವರ ಯಥಾರ್ಥ ಮನೋಭೂಮಿಕೆ – ಇವುಗಳ ಆಧಾರ ಸಹಿತ ದರ್ಶನವನ್ನು ಈ ಕೃತಿಯಲ್ಲಿ ಕಾಣಬಹುದು. ಬಾಬಾಸಾಹೇಬರ ಬದುಕಿನ ಸಂಧ್ಯಾಕಾಲದ ಕೊನೆಯ ನಾಲ್ಕು ವರ್ಷಗಳಲ್ಲಿ ಅವರ ನಿಕಟ ಸಂಪರ್ಕದಲ್ಲಿದ್ದ ಅಂತರರಾಷ್ಟ್ರೀಯ ಖ್ಯಾತಿಯ ಕಾರ್ಮಿಕ ನಾಯಕ ದತ್ತೋಪಂತ ಠೇಂಗಡಿ ಅವರು, ತಮ್ಮ ಈ ಸಾಮೀಪ್ಯದ ಮತ್ತು ಸ್ವೀಯ ಪರಾಮರ್ಶನೆಯ ಆಧಾರದ ಮೇಲೆ ಮರಾಠಿಯಲ್ಲಿ ಬರೆದ ’ಸಾಮಾಜಿಕ ಕ್ರಾಂತೀಚೀ ವಾಟಚಾಲ ಆಣಿ ಡಾ|| ಅಂಬೇಡ್ಕರ್, ಪುಸ್ತಕದ ಕನ್ನಡಾನುವಾದವೇ ’ಸಾಮಾಜಿಕ ಕ್ರಾಂತಿಸೂರ್ಯ ಡಾ. ಬಾಬಾ ಸಾಹೇಬ್ ಅಂಬೇಡ್ಕರ್’. ಇದು ಡಾ|| ಬಾಬಾ ಸಾಹೇಬರ ಜೀವನ ಚರಿತ್ರೆಯಲ್ಲ; ಆದರೆ ಅವರ ವ್ಯಕ್ತಿತ್ವ ಮತ್ತು ಜೀವನಕಾರ್ಯದ ಕುರಿತ ಅಧ್ಯಯನಪೂರ್ಣ ಶಬ್ದಚಿತ್ರ. ಪರಸ್ಪರ ಭೇಟಿಯಾದಾಗಲೆಲ್ಲ ಅವರಿಬ್ಬರ ನಡುವೆ ಗಂಭೀರ ವೈಚಾರಿಕ ಸ್ತರದಲ್ಲಿ ಸಂವಾದ ನಡೆಯುತ್ತಿತ್ತು. ಈ ಸಂವಾದ-ಜಿಜ್ಞಾಸೆಗಳಿಂದ ಠೇಂಗಡಿ ಅವರ ಈ ಕೃತಿಯು ಅಂಬೇಡ್ಕರ್ ಅವರ ಚಿಂತನರೀತಿಯನ್ನೂ ವಿಶಾಲ ದೃಗ್‌ಭೂಮಿಕೆಯನ್ನೂ ಪ್ರಖರ ರಾಷ್ಟ್ರೀಯತಾ ನಿಷ್ಠೆಯನ್ನೂ ಆಧಾರಭೂತವಾಗಿ ಎತ್ತಿ ತೋರಿಸಿದೆ.
Reviews
There are no reviews yet.