Book Description
20ನೇ ಶತಮಾನದ ಕೊನೆಯ ಎರಡು ದಶಕಗಳಲ್ಲಿ ಭಾರತೀಯ ಇತಿಹಾಸ ಸಂಶೋಧನ ಕ್ಷೇತ್ರದಲ್ಲಿ ಆಗಿರುವ ಪ್ರಗತಿ ದಾಖಲೆಗೆ ಅರ್ಹವಾದುದು. ವೇದಕಾಲೀನ ಸರಸ್ವತೀ ನದಿಯ ಹರಿವಿನ ಪಥದ ವೈಜ್ಞಾನಿಕ ನಿರ್ಣಯದಿಂದ ಆರಂಭವಾದ ಈ ಕ್ರಾಂತಿಕಾರಕ ಬೆಳವಣಿಗೆ ಸಿಂಧೂಮುದ್ರೆಗಳ ಲಿಪಿಯ ಭೇದನದೊಡನೆ ಒಂದು ನಿರ್ಣಾಯಕ ಘಟ್ಟ ತಲಪಿದೆ. ಹೊಸ ಮಾಹಿತಿಗಳು ಬೆಳಕು ಕಂಡಿರುವುದು ಮಾತ್ರವಲ್ಲ; ಹಿಂದಿಗಿಂತ ಹೆಚ್ಚು ನಿಶಿತವಾದ ಸಂಶೋಧನಕ್ರಮವೊಂದು ಆವಿಷ್ಕಾರಗೊಂಡಿರುವುದು ಒಂದು ಮಹತ್ತ್ವದ ಹೆಜ್ಜೆ. ಈ ಹೊಸ ಶೋಧಪ್ರಕ್ರಿಯೆಯಿಂದಾಗಿ ಆರ್ಯ ಆಕ್ರಮಣ; ಮೊದಲಾದ ಅತಾಕಿಕ ವಾದಗಳು ಕುಸಿದಿವೆ; ವೇದಗಳ ರಚನೆ ಕ್ರಿ.ಪೂ. ೩೫೦ಕ್ಕಿಂತ ಬಹಳ ಹಿಂದೆಯೇ ಆಗಿದ್ದಿತೆಂಬುದು ಸಿದ್ಧಪಟ್ಟಿದೆ. ಇತಿಹಾಸ ಶೋಧನೆಯ ಈ ಈಚಿನ ಪಯಣದ ಮುಖ್ಯ ಆಯಾಮಗಳನ್ನು ಪರಿಚಯಿಸುವ ಬರಹಗಳ ಸಂಕಲನ – ‘ಇತಿಹಾಸ, ಸಂಸ್ಕೃತಿ ಮತ್ತು ರಾಷ್ಟ್ರೀಯತೆ’.
Reviews
There are no reviews yet.