Sale!

ನಾ ಹೇಗೆ ಹಿಂದುವಾದೆ

108.00

Book Description

ಈಗ ಹಿಂದೂಧರ್ಮದ ದೃಢೀಕರಣಕ್ಕೆ ತಮ್ಮನ್ನು ಮೀಸಲಾಗಿಸಿಕೊಂಡ ’ಬೌದ್ಧಿಕ ಕ್ಷತ್ರಿಯ’ರ ಆವಶ್ಯಕತೆ ತೀವ್ರವಾಗಿದೆ – ಎಂದು ಅನೇಕ ವರ್ಷಗಳಿಂದ ಪ್ರತಿಪಾದಿಸಿರುವುದಲ್ಲದೆ ಆ ದಿಶೆಯಲ್ಲಿ ಹಲವಾರು ಪ್ರಯತ್ನಗಳನ್ನೂ ನಡೆಸಿರುವ ಅಂತರರಾಷ್ಟ್ರೀಯ ಖ್ಯಾತಿಯ ವೇದವಿದ್ವಾಂಸ, ಡೇವಿಡ್ ಫ್ರಾಲಿ (ವಾಮದೇವಶಾಸ್ತ್ರಿ). ಸತ್ಯದ ಅಮರತೆಯ ಪರಂಪರೆಯನ್ನು ಸೂಚಿಸುವ ಸನಾತನಧರ್ಮದ ಆಧುನಿಕ ಹೆಸರು ಹಿಂದೂಧರ್ಮವೆಂದೂ ವೇದ-ವೇದಾಂತಗಳ ಸತ್ಯ ಮತ್ತು ಸಾರ್ವತ್ರಿಕತೆಯು ಹಿಂದೂ ಸಂಸ್ಕೃತಿಯ ಎಲ್ಲ ಮುಖಗಳನ್ನೂ ವ್ಯಾಪಿಸಿದೆಯೆಂದೂ ವಿಶಾಲ ಅಧ್ಯಯನದಿಂದಲೂ ಸಾಧನೆ-ಅನುಸಂಧಾನದಿಂದಲೂ ಡೇವಿಡ್ ಫ್ರಾಲಿ ಕಂಡುಕೊಂಡಿದ್ದಾರೆ. ನಾಲ್ಕಾರು ಮೌಲಿಕ ಗ್ರಂಥಗಳನ್ನು ನೀಡಿರುವ ಡೇವಿಡ್ ಫ್ರಾಲಿಯವರ ’ನಾ ಹೇಗೆ ಹಿಂದುವಾದೆ’ ಅವರ ಆಧ್ಯಾತ್ಮಿಕ-ಬೌದ್ಧಿಕ ಪಯಣದ ಹಂತಗಳ ಅನನ್ಯವೂ ಪ್ರೇರಣಾದಾಯಕವೂ ಪ್ರಬೋಧಕವೂ ಆದ ಕಥನ. ಅಮೆರಿಕದ ಕ್ರೈಸ್ತ ಕುಟುಂಬವೊಂದರಲ್ಲಿ ಜನಿಸಿದ ಡೇವಿಡ್ ಫ್ರಾಲಿ ತಾರುಣ್ಯದಶೆ ತಲಪುವ ವೇಳೆಗೆ ಅವರಿಗೆ ಪಾಶ್ಚಾತ್ಯ ಚರ್ಚ್ ಸಂಸ್ಥೆಯ ಮಂಡನೆಗಳೂ ಆಚರಣೆಗಳೂ ಧಾರ್ಮಿಕತೆಯಿಂದಲೂ ವೈಜ್ಞಾನಿಕತೆಯಿಂದಲೂ ದೂರ ಸರಿದಿವೆಯೆಂದು ನಿಶ್ಚಯವುಂಟಾಗಿ, ತಾವು ಅರಸುತ್ತಿದ್ದ ಜ್ಞಾನದ ಬೆಳಕನ್ನು ವೇದ-ವೇದಾಂಗ-ವೇದಾಂತಗಳಲ್ಲಿ ಕಂಡು ವೇದವಾಙ್ಮಯವನ್ನು ಆಳವಾಗಿ ಅಭ್ಯಾಸ ಮಾಡತೊಡಗಿದವರು. 1991ರಲ್ಲಿ ಮುಂಬಯಿಯ ಮಸೂರಾಶ್ರಮದಲ್ಲಿ ನಡೆದ ಸರಳ ’ಶುದ್ಧಿ’ ಕಲಾಪದ ಮೂಲಕ ಔಪಚಾರಿಕವಾಗಿ ಹಿಂದೂವಾಗಿ ಋಗ್ವೇದ ಋಷಿಗಳಲ್ಲಿ ಅಗ್ರಪಂಕ್ತಿಯ ದ್ರಷ್ಟಾರ ’ವಾಮದೇವಶಾಸ್ತ್ರಿ’ ಎಂಬ ಅಭಿಧಾನವಿರಿಸಿಕೊಂಡರು. ಅವರ ವಿದ್ವತ್ತಿನ ವೈಶಾಲ್ಯವನ್ನು ಪರಿಗಣಿಸಿ 1556ರಲ್ಲಿ ಅವರಿಗೆ ಮಸೂರಾಶ್ರಮ ’ಆಚಾರ್ಯ’ ಪದವಿಯನ್ನು ನೀಡಿತು. ಇದೀಗ ಅಮೆರಿಕದ ನ್ಯೂಮೆಕ್ಸಿಕೋ ಪ್ರಾಂತದ ಸಾಂತಾಫೇಯಲ್ಲಿರುವ ’ಅಮೆರಿಕನ್ ಇನ್‌ಸ್ಟಿಟ್ಯೂಟ್ ಆಫ್ ವೇದಿಕ್ ಸ್ಟಡೀಸ್’ ಸಂಸ್ಥೆಯ ನಿರ್ದೇಶಕರಾಗಿದ್ದಾರೆ. ಅವರು ಜೀವನದಲ್ಲಿ ಸಾಧನೆ ಅನುಸಂಧಾನದ ಮೂಲಕ ಕಂಡುಕೊಂಡ ವಿಚಾರಗಳೇ ಈ ಪುಸ್ತಕದಲ್ಲಿ ಮೂಡಿಬಂದಿದೆ.

Additional information

Book No

ISBN

Moola

Author Name

Published Date

Language

Reviews

There are no reviews yet.

Be the first to review “ನಾ ಹೇಗೆ ಹಿಂದುವಾದೆ”

Your email address will not be published.

This site uses Akismet to reduce spam. Learn how your comment data is processed.