Book Description
ಈ ಪುಸ್ತಕವು ಡಾ. ಮಾಂತೆಸೋರಿ ಅವರ ಪರಿಶೋಧನೆಯ ಫಲ. ಇದಕ್ಕೆ ಅವರ ವೈಜ್ಞಾನಿಕ ಹಿನ್ನೆಲೆ ಮತ್ತು ಶಿಶುಮನೋವಿಜ್ಞಾನ ತಜ್ಞತೆಯೇ ಕಾರಣ. ಮಕ್ಕಳೊಡನೆ ಹತ್ತಾರು ವರ್ಷಗಳ ಕಾಲ ಕೆಲಸ ಮಾಡಿ ಅವರನ್ನು ಅವಲೋಕಿಸಿದ ನಂತರ, ಇತ್ತೀಚೆಗೆ ಪ್ರಖ್ಯಾತವಾಗಿರುವ ಮಾಂತೆಸೋರಿ ಶಿಕ್ಷಣ ವಿಧಾನವು ರೂಪುಗೊಂಡಿತು. ಅವರ ಜೀವಕಳೆ ತುಂಬಿರುವ ಪರಿಣಾಮಕಾರಿ ತತ್ತ್ವಗಳು ಪ್ರಭಾವ ಬೀರದೆ ಇರುವ ದೇಶಗಳೇ ಇಲ್ಲ ಎನ್ನಬಹುದು. ಮಗುವಿನ ಬಗ್ಗೆ ಇರುವ ಮಾಂತೆಸೋರಿಯ ದೃಷ್ಟಿಕೋನ ಅರ್ಥವಾಗಲು ಬಹಳ ಸುಲಭವಾದುದು. ಇದಕ್ಕೆ ಕಾರಣವೇನೆಂದರೆ ಅವರು ಮಗುವನ್ನು ಒಂದು ವಸ್ತುವಾಗಿ ನೋಡಲಿಲ್ಲ. ಅವರು ಮಗುವನ್ನು ಮಾನವನಾಗಿ ನೋಡಿದರು; ಒಂದು ಪ್ರಯೋಗಾತ್ಮಕ ಒರೆಗಲ್ಲಾಗಿ ಕಂಡರು.
ಮಕ್ಕಳ ಶಿಕ್ಷಣವನ್ನು ಸುಧಾರಿಸಲು ತನ್ನ ಜೀವನವನ್ನೇ ಮುಡುಪಾಗಿಟ್ಟ ಮಾಂತೆಸೋರಿ ಅವರು ಇಟಲಿ ಭಾಷೆಯಲ್ಲಿ ಬರೆದಿರುವ The Secret of Childhood ಎಂಬ ಅತ್ಯಂತ ಜನಪ್ರಿಯ ಪುಸ್ತಕವೇ ಶೈಶವ – ಗುಪ್ತ ಚೈತನ್ಯದ ಅದ್ಭುತ.
Reviews
There are no reviews yet.