Book Description
ಸುಮಾರು ಮೂರೂವರೆ ಶತಮಾನಗಳನ್ನು ದೀರ್ಘಕಾಲ ಭಾರತದಲ್ಲಿದ್ದ ಬ್ರಿಟಿಷರು ತಾವಿದ್ದಷ್ಟೂ ಕಾಲವೂ ಬಗೆಬಗೆಯಾಗಿ ಇಲ್ಲಿಯ ಸಂಪತ್ತನ್ನು ಕೊಳ್ಳೆಹೊಡೆದರು. ಬ್ರಿಟನ್ನಿನ ಅಂದಿನ ವೈಭವವೆಲ್ಲ ಭಾರತೀಯರ ಬೆವರಿನ ಫಲ; ಆ ವಿಲಾಸ-ವೈಭೋಗಗಳಿಗೆ ರಂಗುತುಂಬಿದ್ದು ಬ್ರಿಟಿಷರು ಹೀರಿದ ಭಾರತೀಯರ ರಕ್ತ!
ಬ್ರಿಟಿಷರು ಭಾರತೀಯರನ್ನು ದೋಚುವುದಕ್ಕಾಗಿಯೇ ಅನೇಕ ಕಾನೂನುಗಳನ್ನು ಜಾರಿಗೊಳಿಸಿದರು; ವಿವಿಧ ಬಗೆಯ ತೆರಿಗೆಗಳನ್ನು ವಿಧಿಸಿದರು. ದಿನಬಳಕೆಯ ಅಗತ್ಯವಸ್ತುವಾದ ಉಪ್ಪಿನ ಮೇಲೂ ಸುಂಕ ಹೇರಿದರು; ಉಪ್ಪಿನ ಸಾಗಾಟವನ್ನು ನಿರ್ಬಂಧಿಸಿದರು. ಉಪ್ಪಿನ ಸಾಗಾಟದ ಮೇಲೆ ಹದ್ದಿನ ಕಣ್ಣಿಡಲು ನಿರ್ದಾಕ್ಷಿಣ್ಯವಾಗಿ ಕಂದಾಯ ವಸೂಲಿ ಮಾಡಲು; ದಕ್ಷಿಣ ಮತ್ತು ಪಶ್ಚಿಮ ಭಾರತದಿಂದ ಪೂರ್ವೋತ್ತರ ಭಾರತಕ್ಕೆ ಉಪ್ಪಿನ ಮುಕ್ತ ಸಾಗಾಟ ನಡೆಯುವುದನ್ನು ತಪ್ಪಿಸಲು ಮುಳ್ಳುಕಂಟಿಗಳಲಿಂದ ದಟ್ಟ ಪೊದೆಗಳಿಂದ ಕೂಡಿದ ೨೫೦೦ ಮೈಲು ಉದ್ದದ ಸುಂಕದ ಬೇಲಿಯನ್ನು ರೂಪಿಸಿದರು. ಈ ಬೇಲಿಯ ಇಕ್ಕೆಲಗಳಲ್ಲಿ ಕಾವಲಿಗೆಂದು ಸುಮಾರು ಹನ್ನೆರಡು ಸಾವಿರ ಸಿಬ್ಬಂದಿಯನ್ನು ನಿಯೋಜಿಸಿದ್ದರು.
ಇಂಥದ್ದೊಂದು ಬೃಹತ್ತಾದ ಬೇಲಿಯ ಜಾಡುಹಿಡಿದು ಹೊರಟ ಬ್ರಿಟಿಷ್ ಪ್ರಜೆ ರಾಯ್ ಮ್ಯಾಕ್ಸ್‌ಹ್ಯಾಮ್ ದಾಖಲಿಸಿದ ಅಪೂರ್ವ ಅನುಭವಗಳ ಸಂಗ್ರಹ ರೂಪ ’ಭಾರತದಲ್ಲೊಂದು ಸುಂಕದ ಬೇಲಿ’.
Reviews
There are no reviews yet.